ಬೆಂಗಳೂರು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೆ ಜೈಲಿನಲ್ಲಿ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂದು (ಬುಧವಾರ ಜುಲೈ 30) ರಂದು ವಿಚಾರಣೆ ನಡೆದಿದ್ದು, ಮತ್ತೆ ಆಗಸ್ಟ್ ಒಂದಕ್ಕೆ ಪ್ರಜ್ವಲ್ ರೇವಣ್ಣ ಅವರ ಕೇಸನ್ನು ಜನಪ್ರತಿನಿಧಿಗಳ ಕೋರ್ಟ್ ಮುಂದೂಡಿದೆ.
ಇನ್ನು ಕೋರ್ಟಿನಲ್ಲಿ ನ್ಯಾಯಾಧೀಶರ ಮುಂದೆ ಪ್ರಜ್ವಲ್ ರೇವಣ್ಣ ಅವರು ಕೈಮುಗಿದು ನಿಂತಿದ್ದರೂ ಎಂದು ತಿಳಿದುಬಂದಿದೆ. ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ನ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ತೀರ್ಪು ಪ್ರಕಟಿಸಲಿದ್ದಾರೆ.
ಇನ್ನು ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು 4 ಕೇಸ್ಗಳಿವೆ. ಈ ನಾಲ್ಕು ಕೇಸ್ಗಳ ಪೈಕಿ ಈಗ ಮೊದಲ ಕೇಸ್ ತೀರ್ಪು ಪ್ರಕಟವಾಗುತ್ತಿದೆ. ಈ ಕೇಸ್ನಲ್ಲಿ ಈಗಾಗಲೇ ವಾದ- ಪ್ರತಿವಾದ ಮುಗಿದಿದ್ದು, ಸಾಕ್ಷ್ಯಗಳ ವಿಚಾರಣೆ ಕೂಡ ಮುಗಿದಿದೆ. ಆಗಸ್ಟ್ 1 ರಂದು ಪ್ರಜ್ವಲ್ ಅಪರಾಧಿಯೋ ಅಥವಾ ಅಲ್ಲವೋ ಎಂದು ಕೋರ್ಟ್ ಮೊದಲಿಗೆ ತೀರ್ಪು ನೀಡಲಿದೆ. ಒಂದು ವೇಳೆ ಅಪರಾಧಿ ಎಂದು ತೀರ್ಪು ನೀಡಿದರೆ ಬಳಿಕ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗುತ್ತೆ. ಶಿಕ್ಷೆಯ ಪ್ರಮಾಣದ ಬಗ್ಗೆ ವಾದ-ಪ್ರತಿವಾದ ನಡೆಯಲಿದೆ. ಗರಿಷ್ಠ ಶಿಕ್ಷೆಯನ್ನು ವಿಧಿಸಬೇಕೆಂದು ಪ್ರಾಸಿಕ್ಯೂಷನ್ ಪರ ವಕೀಲರು ವಾದ ಮಂಡಿಸಲಿದ್ದಾರೆ. ಕಡಿಮೆ ಶಿಕ್ಷೆ ವಿಧಿಸಬೇಕೆಂದು ಪ್ರಜ್ವಲ್ ರೇವಣ್ಣ ಪರ ವಕೀಲರು ಪ್ರತಿವಾದ ಮಂಡಿಸುವ ಸಾಧ್ಯತೆ ಇದೆ.
