ಶಹಾಪುರ: ಸಮಾ ಸಮಾಜ ನಿರ್ಮಾಣದ ಅಂಗವಾಗಿ ಸಂವಿಧಾನ ಸಂವರಕ್ಷಣಾ ಸಮಿತಿ ಆಶ್ರೆಯಲ್ಲಿ ಆಗಸ್ಟ್ 9 ರಂದು ಶಹಾಪುರದಲ್ಲಿ ಬೃಹತ್ ಜಿಲ್ಲಾ ಮಟ್ಟದ ಸಂವಿಧಾನ ಜಾಗೃತಿ ಸಮಾವೇಶ ನಡೆಯುವ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ಕರಪತ್ರ ಬಿಡುಗಡೆ ಮಾಡಲಾಯಿತು. ನಗರದ ಹೊರಹೊಲಯದಲ್ಲಿ ನಡೆಯಲ್ಲಿರುವ ಈ ಸಂವಿಧಾನ ಜನ ಜಾಗೃತಿ ಸಮಾವೇಶದಲ್ಲಿ ಅಲ್ಪಸಂಖ್ಯಾತ ಹಿಂದುಳಿದ, ದಲಿತ ಸೇರಿದಂತೆ ಶೋಷಿತ ಸಮುದಾಯಗಳ ಸಂಘಟಿತ ಶಕ್ತಿಯನ್ನು ಒಗ್ಗಟ್ಟಾಗಿಸಲು ಈ ಕಾಮರ್ಯಕ್ರಮ ಬೃಹತ್ ಪ್ರಮಾಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂವಿಧಾನ ಹಿತರಕ್ಷಣಾ ಸಮಿತಿ ಅಧ್ಯಕ್ಷರು ಪಧಾಧಿಕಾರಿಗಳು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.
ಅಂದಿನ ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರು, ಪ್ರಗತಿಪರ ಚಿಂತಕರು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ತಿಳಿಸಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗದಿಂದ ಆಗಮಿಸಿ ಸಂವಿಧಾನ ಜನ ಜಾಗ್ರತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಕೊರಿದರು. ಇದನ್ನೂ ಓದಿ: ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೆಲಸದ ಭರವಸೆ
ಈ ಸಂಧರ್ಭದಲ್ಲಿ ಸಮಿತಿ ಪಧಾಧಿಕಾರಿಗಳಾದ ಅಯ್ಯಣ್ಣ ಕನ್ಯಾಕೊಳೂರ, ಗೀರೆಪ್ಪಗೌಡ ಬಾಣತಿಹಾಳ,ನೀಲಕಂಠ ಬಡಿಗೇರ, ಗೌಡಪ್ಪಗೌಡ ಆಲ್ದಾಳ, ಡಾ,ರವಿಂದ್ರನಾಥ ಹೋಸಮನಿ,ಮಲ್ಲಪ್ಪ ಬೀರನೂರ, ಚಂದಪ್ಪ ಸಿತ್ನಿ, ಬಾಬುರಾವ್ ಬೂತಾಳಿ, ರಾಯಪ್ಪ ಸಾಲಿಮನಿ, ಮರೆಪ್ಪ ಪ್ಯಾಟಿ, ವೇಂಕಟೇಶ ಆಲೂರ, ಸೈಯದ್ ಕಾಲೀದ್, ರಾಯಪ್ಪ ಸಾಲಿಮನಿ, ಶಾಂತಪ್ಪ ಕಟ್ಟಿಮನಿ, ರುದ್ರಪ್ಪ ಹುಲಿಮನಿ, ಸೋಪಣ್ಣ ದರಿಯಾಪುರ, ಬಸವರಾಜ ತಳವಾರ,ಚಂದ್ರು ಚಕ್ರವರ್ತಿ, ಮಾಹಾದೇವ ದಿಗ್ಗಿ, ದೇವಿಂದ್ರಪ್ಪ ಕನ್ಯಾಕೊಳೂರ, ವಕೀಲರಾದ ಶ್ರೀಮತಿ ಸತ್ಯಮ್ಮ, ಚಂದ್ರು ಜಾದವ್, ಭೀಮರಾಯ ಜುನ್ನಾ, ದೇವಿಂದ್ರಪ್ಪ ಕನ್ಯಾಕೊಳೂರ, ಭೀಮರಾಯ ದಿಗ್ಗಿ.ಬಸವರಾಜ ಪೂಜಾರಿ, ಶರಣರಡ್ಡಿ ಹತ್ರತಿಗೂಡೂರ, ಮಲ್ಲಪ್ಪ ತಳಕೇರಿ,ಲಕ್ಷ್ಮಣ, ಶೇಟ್ಟಿಕೇರಿ,ಬರಮಣ್ಣ ಹೋತಪೇಟ,ಯಲ್ಲಪ್ಪ ನಾಯ್ಕೊಡಿ, ಚಂದ್ರು ಬೇವಿನಳ್ಳಿ, ಕಂಡಪ್ಪ ಕಂಚನಕವಿ, ಈರಣ್ಣ ಶಖಾಪುರ ಸೇರಿದಂತೆ ಅನೇಕರು ಹಾಜರಿದ್ದರು.
