ಮೈಸೂರು: ನಾಲ್ವಡಿ ಒಡೆಯರಿಗಿಂತ ಸಿದ್ದರಾಮಯ್ಯ ಅವರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈ ಹೇಳಿಕೆಗೆ ಇದೀಗ ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರಿಗೆ ಹಸಿದ ಹೊಟ್ಟೆಗೆ ಆಹಾರ ಸಿಕ್ಕಂತಾಗಿದೆ.
ಹೌದು, ಯತೀಂದ್ರ ಅವರ ಮಾತಿಗೆ ಈಗಾಗಲೇ ವಿರೋಧ ಪಕ್ಷದ ನಾಯಕರು ಟೀಕೆ ಮಾಡುತ್ತಿದ್ದಾರೆ. ಇನ್ನು ಈ ಕುರಿತು ಹೆಚ್ಚು ವಿಶ್ವನಾಥ್ ಅವರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹೆಚ್ಚು ವಿಶ್ವನಾಥ್ ಅವರು, ಯತೀಂದ್ರ ಸಿದ್ರಾಮಯ್ಯ ಅವರು ಮಾತನಾಡಿರುವುದು ದುರಂಕಾರದ ಮಾತು. ದುರಂಕಾರದ ಪರಮಾವಧಿ, ಅವರ ತಂದೆ ಸಿದ್ದರಾಮಯ್ಯ ಅವರು ಕೂಡ ನಾನೇ, ನಾನೇ, ನಾನು ದೇವರಾಜ್ ಅರಸನಿಗಿಂತ ದೊಡ್ಡವನು ಎಂದು ಹೇಳಿಕೊಳ್ಳುತ್ತಾರೆ. ಈಗ ಮಗ ಕೂಡ ಮಹಾರಾಜರಿಗಿಂತ ದೊಡ್ಡವರು ಎಂದು ಹೇಳಿಕೊಂಡಿದ್ದಾರೆ.
ಸಿದ್ದರಾಮಯ್ಯ ಅವರ ಕುಟುಂಬದಲ್ಲಿಯೇ ದುರಂಕಾರ ಎಂಬುವುದು ವಂಶಾವಳಿ ಇಂದಲೇ ಬೆಳೆದುಕೊಂಡು ಬಂದಿದೆ ಎಂದು ಹೇಳಿದ್ದಾರೆ. 5 ಕೆಜಿ ಅಕ್ಕಿ ಕೊಟ್ಟ ಕೂಡಲೇ ಇವರು ದೇವರಾಜ್ ಅರಸರಿಗಿಂತ ದೊಡ್ಡವರ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಗವಿಸಿದ್ದೇಶ್ವರ ಮಠದಲ್ಲಿ ಮುಸ್ಲಿಂ ಮಹಿಳೆ ಭಕ್ತಿಯಿಂದ ಧ್ಯಾನ..!
ದುರಹಂಕಾರ ಇವರ ವಂಶವಾಹಿಯಾಗಿ ಹರಿಯುತ್ತಿದೆ, ಸಿದ್ದರಾಮಯ್ಯ ನಾನೇ ಶ್ರೇಷ್ಠ ಅನ್ಕೊಂಡು ತಿರುಗುತ್ತಾರೆ, ನಾನು ಮಹಾರಾಜರಿಗಿಂತ ದೊಡ್ಡವ, ದೇವರಾಜ ಅರಸು ಅವರಿಗಿಂತ ಹೆಚ್ಚು ಜನಪ್ರಿಯ, ಖ್ಯಾತಿವಂತ ಅಂತ ಅಂದುಕೊಳ್ಳೋದು ಸರಿಯಲ್ಲ ಎಂದು ವಿಶ್ವನಾಥ್ ಹೇಳಿದರು.
