ಕೊಪ್ಪಳ: ಭಕ್ತಿ ಭಾವನೆಗೆ ಯಾವ ಜಾತಿಯಾದರೇನು, ಯಾವ ಧರ್ಮವಾದರೇನು, ದೇವರು ಒಳಿತು ಮಾಡುತ್ತಾನೆ ಎಂದು ತಿಳಿದರೆ ಯಾವ ಹಿಂದೂ ದೇವರಾದರೇನು? ಯಾವ ಮುಸ್ಲಿಂ ಧರ್ಮವಾಧರೇನು? ಯಾವಾಗ ಕ್ರಿಶ್ಚಿಯನ್ ಧರ್ಮವಾದರೆ ಏನು, ದೇವರು ದೇವರೇ.
ಮನುಷ್ಯರ ಕಷ್ಟಗಳನ್ನು ನಿವಾರಿಸಲು ಎಲ್ಲರೂ ತಮ್ಮ ತಮ್ಮ ಧರ್ಮದ ಪ್ರಕಾರ ದೇವರುಗಳನ್ನು ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಆದರೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಕುದುರಿಮೋತಿ ಗ್ರಾಮದ ಮುಸ್ಲಿಂ ಮಹಿಳೆ ಹಸಿನ ಬೇಗಂ ಎನ್ನುವವರು ಕೊಪ್ಪಳದ ಗವಿಸಿದ್ದೇಶ್ವರ ಮಠದ ಆವರಣದಲ್ಲಿ ನಾಗದೇವತೆಯ ಮುಂದೆ ಜ್ಞಾನ ಮಾಡುತ್ತಿರುವುದು ಕಂಡು ಬಂದಿದೆ.
ಹೌದು, ಕೊಪ್ಪಳದ ಗವಿಸಿದ್ದೇಶ್ವರ ಮಠದ ಆವರಣದಲ್ಲಿರುವ ನಾಗದೇವತೆಯ ಮುಂದೆ ಕುಳಿತುಕೊಂಡು ಹಸಿನ ಎಂಬುವವರು ಒಂದು ಗಂಟೆಗಳ ವರೆಗೆ ಜ್ಞಾನ ಮಾಡುತ್ತಾರೆ ಎಂದು ಅವರೇ ಸ್ವತಃ ಹೇಳಿಕೊಂಡಿದ್ದಾರೆ. ನಾನು ಮುಸ್ಲಿಂ ಆಗಿದ್ದರು ಕೂಡ ಎಲ್ಲ ದೇವರನ್ನು ಪೂಜಿಸುತ್ತೇನೆ.
ಅದರಲ್ಲೂ ಕೂಡ ಕಳೆದ 13 ವರ್ಷಗಳಿಂದ ನಾನು ಗವಿಸಿದ್ದೇಶ್ವರ ದೇವರನ್ನು ನಂಬಿದ್ದೇನೆ ಹಾಗಾಗಿ ನಾನು 11 ದಿನಗಳ ಕಾಲ ನನ್ನ ಮನಸ್ಸಿನ ನೆಮ್ಮದಿಗೋಸ್ಕರ ಇಲ್ಲಿ ಧ್ಯಾನ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ತಮ್ಮ ಹರಕೆಯ ತೀರಿಸಲು ಮತ್ತು ಮಾನಸಿಕ ನೆಮ್ಮದಿಗಾಗಿ ಧ್ಯಾನ ಮಾಡುತ್ತಿರುವುದಾಗಿ ಮುಸ್ಲಿಂ ಮಹಿಳೆ ಹೇಳಿಕೊಂಡಿದ್ದಾರೆ.
ಗವಿ ಮಠದ ಶ್ರೀಗಳು ನಿತ್ಯ ಸಂಜೆ ಹೊತ್ತಲ್ಲಿ ಕುಳಿತುಕೊಳ್ಳುವ ಜಾಗದ ಮುಂದೆಯೆ ಮಹಿಳೆಯಿಂದ ಧ್ಯಾನ ಮಾಡುತ್ತಿದ್ದು, ಮಾನಸಿಕ ನೆಮ್ಮದಿಗಾಗಿ ಒಟ್ಟು 11 ದಿನ ಧ್ಯಾನ ಮಾಡುವುದಾಗಿ ಹಸೀನಾ ಬೇಗಂ ಬೇಡಿಕೊಂಡಿದ್ದಾರೆ ಎನ್ನಲಾಗಿದೆ. ಮನಸ್ಸಿಗೆ ನೆಮ್ಮದಿ ಇರಲಿಲ್ಲ, ಬಹಳ ಕಷ್ಟ ಇತ್ತು. ಹೀಗಾಗಿ ಶ್ರೀಗಳ ಬಳಿ ಕೇಳಿಕೊಂಡು 8 ದಿನದಿಂದ ಧ್ಯಾನ ಮಾಡುತ್ತಿದ್ದೇನೆ. ನಾನು ಮುಸ್ಲಿಂ ಆದರೂ ಎಲ್ಲಾ ಧರ್ಮ ಒಂದೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಆಗುತ್ತಿರುವ ಅನ್ಯಾದ ಬಗ್ಗೆ ಕೇಂದ್ರ ಸಚಿವರು, ಸಂಸದರು ಗಮನಹರಿಸಬೇಕು: ಡಿಕೆಸು
ಮಠದಲ್ಲಿ ಮುಸ್ಲಿಂ ಎಂಬ ಬೇಧ-ಭಾವ ಇಲ್ಲ. ನನಗೆ ಒಬ್ಬರಿಂದ ನೋವು ಆಗಿದೆ. ಹಾಗಾಗಿ ನಿತ್ಯ ಒಂದು ಗಂಟೆ ಧ್ಯಾನಕ್ಕೆ ಕೂತಿದ್ದೇನೆ. ನನಗೆ ಬಹಳ ಕಷ್ಟ ಇದೆ, ಪರಿಹಾರ ಆಗತ್ತೆ. ನನ್ನ ಮಕ್ಕಳ ಮೇಲೂ ಅಜ್ಜರ ಆಶೀರ್ವಾದ ಇದೆ. ನಾಗಪ್ಪ, ಬಸವಣ್ಣ ಎಲ್ಲರನ್ನೂ ಪೂಜೆ ಮಾಡುತ್ತೇನೆ. ಮನಸ್ಸಿಗೆ ನೆಮ್ಮದಿ ಸಿಗುತ್ತೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
