ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ತಮ್ಮ ಬ್ಯಾಚುಲರ್ ಲೈಫ್ ಗೆ ಬ್ರೇಕ್ ಹಾಕಲು ರೆಡಿಯಾಗಿದ್ದು, ಆಗಸ್ಟ್ 28ರಂದು ಅನುಶ್ರೀ ಹಾಗೂ ರೋಷನ್ ಅವರು ದಾಂಪತ್ಯ ಜೀವನಕ್ಕೆ
ಹೌದು, ಹೆಸರಾಂತ ಕನ್ನಡದ ನಿರೂಪಕಿ ಅನುಶ್ರೀ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ಈಗಾಗಲೇ ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದೆ.
ಇನ್ನು ರೋಶನ್ ಎನ್ನುವವರು ಯಾರು? ಅವರ ಮತ್ತು ಅನುಶ್ರೀ ಮದ್ಯ ಹೇಗೆ ಮದುವೆ ಮಾತುಕತೆ ನಡೆಯಿತು ಎಂಬುದು ಎಲ್ಲರಲ್ಲಿ ಯಕ್ಷಪ್ರಶ್ನೆಯಾಗಿದೆ. ಇದನ್ನೂ ಓದಿ: ಥೈಲ್ಯಾಂಡ್ನಲ್ಲಿ ಕಾಟೇರ ಫುಲ್ ಜಾಲಿ ಜಾಲಿ..!
ಬೆಂಗಳೂರಿನಲ್ಲಿಯೇ ಅನುಶ್ರೀ ಕೊಡಗು ಮೂಲದ ಉದ್ಯಮಿ ರೋಷನ್ ಎಂಬುವವರನ್ನು ವರಿಸಲಿದ್ದಾರಂತೆ. ಮನೆಯಲ್ಲಿಯೇ ತೋರಿಸಿದ ಹುಡ್ಗನ್ನು ಅನುಶ್ರೀ ಹೈ ಹಿಡಿಯುತ್ತಿದ್ದಾರೆ ಎಂಬ ಸುದ್ದಿ ಇತ್ತು. ಅಸಲಿಗೆ ಅನುಶ್ರೀ ರೋಷನ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಹೊಸ ವಿಷ್ಯವೀಗ ಹೊರಬಿದ್ದಿದೆ.
ಅನುಶ್ರೀ ಮದುವೆಯಾಗುತ್ತಿರುವ ರೋಷನ್ ಪುನೀತ್ ಫ್ಯಾನ್ ಅಂತೇ. ಅನು ಮತ್ತು ರೋಷನ್ ಮೊದಲ ಭೇಟಿಗೆಗೂ ಕಾರಣ ಒಂದು ರೀತಿ ಅಪ್ಪುಎಂದು ತಿಳಿದು ಬರುತ್ತಿದೆ.
ಗಂಧದಗುಡಿ ಇವೆಂಟ್ನಲ್ಲಿ ರೋಷನ್ ಅನುಶ್ರೀ ಪರಿಯಚವಾಯ್ತು. ಪರಿಚಯ ಸ್ನೇಹವಾಯ್ತು. ಸ್ನೇಹ ಪ್ರೀತಿಗೆ ತಿರುಗಿತಂತೆ. ಈ ಪ್ರೀತಿಗೆ ಈಗ ಈ ಜೋಡಿ ಮದುವೆ ಮುದ್ರೆ ಒತ್ತಲು ಹೊರಟಿದ್ದಾರೆ. ಇದೇ ಆಗಸ್ಟ್ 28ಕ್ಕೆ ಗ್ರ್ಯಾಂಡ್ ಆಗಿ ಅನುಶ್ರೀ ರೋಷನ್ ಹೊಸ ಬದುಕು ಶುರು ಮಾಡಲಿದ್ದಾರೆ. ಈ ಜೋಡಿ ಪ್ರೀತಿಯನ್ನು ಒಪ್ಪಿ ಮನೆಯವರು ಮದುವೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
