ಬೆಂಗಳೂರು: ರೇಣುಕಾ ಸ್ವಾಮಿ ಕೊ*ಲೆ ಪ್ರಕರಣದ ಮೇಲೆ ನಟ ದರ್ಶನ್ ಷರತುಬದ್ಧ ಜಾಮೀನು ಮೇಲೆ ಹೊರಬಂದ ಮೇಲೆ ಡೆವಿಲ್ ಸಿನಿಮಾದ ಚಿತ್ರೀಕರಣದಲ್ಲಿ ಫುಲ್ ಬಿಜಿಯಾಗಿದ್ದಾರೆ. ಈಗಾಗಲೇ ಬೆಂಗಳೂರು ಸೇರಿದಂತೆ ರಾಜಸ್ಥಾನ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಬರದಿಂದ ಸಾಗುತ್ತಿದ್ದು, ಡೆವಿಲ್ ಸಿನಿಮಾದ ಸಾಂಗ್ ಒಂದರ ಚಿತ್ರೀಕರಣಕ್ಕೆಂದು ಥೈಲ್ಯಾಂಡ್ ನಲ್ಲಿ ಚಿತ್ರತಂಡವು ಥೈಲ್ಯಾಂಡ್ ನಲ್ಲಿ ಬೀಡುಬಿಟ್ಟಿದೆ
ಥೈಲ್ಯಾಂಡ್ನಲ್ಲಿರುವ ಡೆವಿಲ್ ಚಿತ್ರತಂಡ ಸಿನಿಮಾ ಶೂಟಿಂಗ್ ಗ್ಯಾಪ್ನಲ್ಲೇ ಪಾರ್ಟಿ ಮಾಡಿ ಎಂಜಾಯ್ ಮಾಡುತಿದೆ. ಚಿತ್ರತಂಡ ಜೊತೆ ನಟ ದರ್ಶನ್ ಕೂಡ ನೈಟ್ ಪಾರ್ಟಿಯಲ್ಲಿ ಹಾಜರಾಗಿದ್ರು. ಈ ವೇಳೆ ಫೋಟೋ, ವಿಡಿಯೋಗಳಿಗೆ ಪೋಸ್ ಕೊಟ್ಟಿದ್ದಾರೆ.
ದರ್ಶನ್ ಶೂಟಿಂಗ್ ಮಧ್ಯೆ ಎಂಜಾಯ್ಮೆಂಟ್ ಮಾಡುತ್ತಿದ್ದಾರೆ. ರಾತ್ರಿ ಜೋರು ಪಾರ್ಟಿ ಮಾಡಿರುವ ದಾಸ ಬೆಳಗ್ಗೆ ಯಾಚ್ ಓಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ದರ್ಶನ್ ಅವರಿಗೆ ಬೈಕ್ ಹಾಗೂ ಕಾರುಗಳ ಬಗ್ಗೆ ಸಖತ್ ಕ್ರೇಜ್ ಇದೆ. ಈಗ ಅವರು ಯಾಚ್ ಕೂಡ ರನ್ ಮಾಡಿದ್ದಾರೆ.
