ಶಹಾಪುರ: ಹೆಣ್ಣು ಮಕ್ಕಳಿಗೆ ಆಸ್ತಿ ಕೊಡುತ್ತೇನೆಂದು ಹೇಳಿದ ತಂದೆಗೆ ಪಾಪಿ ಮಗ ಹೊಲದಲ್ಲಿ ಕೊಂದು, ತಾನೇ ಬಂದು ಠಾಣೆಗೆ ಶರಣಾಗಿರುವ ಘಟನೆ ತಾಲೂಕಿನ ಮಡ್ನಾಳ ಕ್ಯಾಂಪ್ನಲ್ಲಿ ನಡೆದಿದೆ. ಯಂಕಪ್ಪ ತಂದೆ ಅಂಬ್ಲಪ್ಪ ಮ್ಯಾಕಲ್ ದೊಡ್ಡಿ(65) ಕೊಲೆಯಾದ ಮೃತ ದುರ್ದೈವಿ ಯಾಗಿದ್ದಾನೆ.
ಘಟನೆ ವಿವರ
ತಾಲೂಕಿನ ಹಳಿಸಗರ ಗ್ರಾಮದ ನಿವಾಸಿಯಾದ ಯಂಕಪ್ಪನಿಗೆ ಇಬ್ಬರು ಹೆಂಡತಿಯರಿದ್ದು, ಮೊದಲನೇ ಹೆಂಡತಿಗೆ 9 ಜನ ಮಕ್ಕಳಿದ್ದು ಅದರಲ್ಲಿ 4 ಜನ ಹೆಣ್ಣು ಮಕ್ಕಳು, 5 ಜನ ಗಂಡು ಮಕ್ಕಳಿದ್ದಾರೆ. 2ನೇ ಹೆಂಡತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೊದಲನೇ ಹೆಂಡತಿಯ ಮಕ್ಕಳಿಗೆ 8 ಜನರಿಗೆ ಮದುವೆಯಾಗಿದ್ದು ಕೊನೆಯ ಮಗನಾದ ನಾಗಪ್ಪನಿಗೆ ಮದುವೆಯಾಗದೆ ಇರುವ ಕೊಲೆ ಪಾಪಿಯಾಗಿದ್ದಾನೆ. ಇದನ್ನೂ ಓದಿ: ಅನಧಿಕೃತ ಶಾಲೆಗಳಿಗೆ ಸರ್ಕಾರಿ ಶಿಕ್ಷಕರೇ ಹೆಡ್ ಬಾಸ್..!
ಮುಂಜಾನೆ ಮಡ್ನಾಳ ಸೀಮಾಂತರದಲ್ಲಿ ಬರುವ ತಮ್ಮ ಹೊಲಕ್ಕೆ ಹೊಗಿದ್ದ. ತಂದೆ ಯಂಕಪ್ಪ ಮತ್ತು ಮಗ ನಾಗಪ್ಪನ ನಡುವೆ ಮಧ್ಯಾನದ ಸುಮಾರಿಗೆ ತಂದೆ ಮಗನ ನಡುವೆ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡುವ ವಿಚಾರಕ್ಕೆ ವಿವಾದ ಉಂಟಾಗಿದ್ದು, ಸಿಟ್ಟಿನಲ್ಲಿ ತಂದೆಗೆ ಕೂಡ ತೆಗೆದುಕೊಂಡು ಹೊಡೆದಿದ್ದು, ತೀವ್ರ ರಸ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತಂದೆ ಯಂಕಪ್ಪನನ್ನು ಕೊಲೆ ಮಾಡಿ ಮಗ ನಾಗಪ್ಪನೇ ಭೀ.ಗುಡಿ ಪೊಲೀಸ್ ಠಾಣೆಗೆ ಬಂದು ತಾನೇ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಎಸ್.ಪಿ ಪೃಥ್ವಿಕ್ ಶಂಕರ, ಡಿಎಸ್ಪಿ ಜಾವೇದ ಇನಾಂದಾರ, ಸಿಪಿಐ ಶರಣಗೌಡ ನ್ಯಾಮನೂರ ಅವರು ಬೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆ ಕುರಿತು ಮಾಹಿತಿ ಪಡೆದು ಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
