ಶಹಾಪುರ: ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಒಳ್ಳೆ ಶಿಕ್ಷಣ ನೀಡಿ ಉನ್ನತ ಹುದ್ದೆಗೇರಿಸಬೇಕು ಅಂತ ಅದೇಷ್ಟೊ ಪೋಷಕರು ಹಗಲಿರಳು ಕಷ್ಪಪಟ್ಟು ಲಕ್ಷ ಲಕ್ಷ ಶುಲ್ಕ ಕಟ್ಟಿರುತ್ತಾರೆ. ಆದರೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಅನಧಿಕೃತ ಕೋಚಿಂಗ್ ಶಾಲೆಗಳು ಪೋಷಕರನ್ನೆ ನಿದ್ದೆಗೇಡಿಸಿವೆ.
ಶಿಕ್ಷಣ ಇಲಾಖೆಯ ನಿರ್ಲಕ್ಷಕ್ಕೆ ಪೋಷಕರ ಕನಸು ಆಸೆಗಳಿಗೆ ಬೆಂಕಿ ಹಚ್ಚಲು ಮುಂದಾಗಿವೆ. ಕಾನೂನು ಕ್ರಮವಹಿಸಿ ಕಡಿವಾಣ ಹಾಕಬೇಕಿದ್ದ ಶಿಕ್ಷಣ ಇಲಾಖೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದು ಅನಧಿಕೃತ ಶಾಲೆಗಳ ವಿಚಾರದಲ್ಲಿ ಮತ್ತೆ ಯೂ ಟರ್ನ್ ಹೊಡೆಯುತ್ತಿದೆ. ಒಳ ಒಪ್ಪಂದಕ್ಕೆ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ವಾಡುತ್ತಿದ್ದಾರೆ.
ಇವುಗಳ ವಿರುದ್ಧ ಸಾಕಷ್ಟು ಹೋರಾಟಗಳು ನಡೆದರು ಸಹ ಏನೂ ಪ್ರಯೋಜನವಾಗಿಲ್ಲಾ. ಅಧಿಕಾರಿಗಳು ವರ್ಗಾವಣೆಯಾಗುತ್ತಿದ್ದಾರೆ, ಹೊಸಬರು ಬರುತ್ತಿದ್ದಾರೆ ಹೊರತು, ಬದಲಾವಣೆ ಮಾತ್ರ ಏನು ಕಣಿಸುತ್ತಿಲ್ಲಾ. ಕೇವಲ ಶಿಕ್ಷಣ ತರಬೇತಿ ಹೊಂದಿದ ನಿರುದ್ಯೋಗಿಗಳಷ್ಟೆ ಅಲ್ಲ ಸರ್ಕಾರಿ, ಅನುದಾನಿತ ಖಾಸಗಿ ಶಾಲೆಗಳಲ್ಲಿ ಕಾಯಂ ಶಿಕ್ಷಕರಾಗಿರುವ ಬಹುತೇಕ ಶಿಕ್ಷಕರು ಈ ಕೇಂದ್ರಗಳನ್ನು ನಡೆಸುತ್ತಿದ್ದಾರೆ ಎನ್ನುವ ಆರೋಪಗಳು ಸಹ ಕೇಳಿಬಂದಿವೆ.
ಶಿಕ್ಷಣದ ಹೆಸರಲ್ಲಿ ಮಹಾವಂಚನೆ ನಡೆಯುತ್ತಿದ್ದು, ಇವುಗಳ ಮೇಲೆ ಶಿಕ್ಷಣ ಇಲಾಖೆಯ ನಿಯಂತ್ರಣವೇ ಇಲ್ಲದಂತಾಗಿದೆ.
ಸರ್ಕಾರಿ ಶಾಲೆಯ ಶಿಕ್ಷಕರೆ ಹೆಡ್ ಬಾಸ್
ಸರ್ಕಾರಿ ಶಾಲೆಯ ಶೀಕ್ಷಕರೆ ಅನಧಿಕೃತ ಕೋಚಿಂಗ್ ಸೆಂಟರ್ಗಳ ಹೆಡ್ ಬಾಸ್ಗಳಾಗಿದ್ದು ಬಹಳ ಸಲೀಸಾಗಿ ಇಲಾಖೆಗೆ ಮಣ್ಣೆರೆಚುತ್ತಿದ್ದಾರೆ. ಒಂದೆಡೆ ಉನ್ನತ ಮಟ್ಟದ ಅಧಿಕಾರಿಗಳ ಲಿಂಕ್ನಿಂದ ಯಾರು ಏನೂ ಮಾಡಲು ಸಾಧ್ಯವಾಗುತ್ತಿಲ್ಲಾ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ಸಚಿವರ ದೂರದೃಷ್ಠಿ ಚಿಂತನೆಗೆ ಎಳ್ಳುನೀರು
ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚು ಅನುದಾನವನ್ನು ನೀಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಹೆಚ್ಚು ಒತ್ತು ನೀಡಿ ಫಲಿತಾಂಶ ಹೆಚ್ಚಿಸುವ ಕನಸನ್ನು ಹೊತ್ತಿದ್ದು, ಇದಕ್ಕೆ ಎಳ್ಳುನೀರು ಬೀಡುವ ಕೆಲಸ ಸರ್ಕಾರಿ ಶಾಲೆಯ ಶೀಕ್ಷಕರೆ ಮಾಡುತ್ತಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ವಿತರಣೆ ಆಗದ ಪಠ್ಯ, ಸಮವಸ್ತ್ರ
ಸರ್ಕಾರಿ ಸೇರಿದಂತೆ ಖಾಸಗಿ ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆದರು ಇನ್ನುವವರೆಗೆ ಸಮವಸ್ತç ಪೂರೈಸುವ ಕೆಲಸಕ್ಕೆ ಶಿಕ್ಷಣ ಇಲಾಖೆ ಮುಂದಾಗಿಲ್ಲಾ. ಇನ್ನೂ ೪೦ ಪ್ರತಿಶತ ಮಾತ್ರ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲಾಗಿದೆ. ಇಂತಹ ಕಾರಣಗಳಿಂದಲೇ ಶೈಕ್ಷಣಿಕವಾಗಿ ಹಿಂದುಳಿಯುವAತೆ ಮಾಡುತ್ತಿದ್ದು, ಪ್ರತಿಬಾರಿಯೂ ಫಲಿತಾಂಶಗಳು ಕುಸಿಯುತ್ತಿದ್ದು ಜಿಲ್ಲೆಯೂ ಕೊನೆಯ ಸ್ಥಾನಕ್ಕೆ ಸಿಮೀತವಾಗುತ್ತಿದೆ.
ಸಮಯಕ್ಕೆ ಬಾರದ ಶಿಕ್ಷಕರು
ಒಂದೆಡೆ ಅನಧಿಕೃತ ಶಾಲೆ, ಕೋಚಿಂಗ್ ಸೆಂಟರ್ಗಳ ಹಾವಳಿಯಾದರೆ ಇನ್ನೊಂದೆಡೆ ಸರ್ಕಾರಿ ಶಾಲೆಗಳಿಗೆ ಶಿಕ್ಷಕರು ಸರಿಯಾದ ಸಮಯಕ್ಕೆ ಬರುವುದೆ ಇಲ್ಲಾ. ೧೧ ಗಂಟೆಯ ಮೇಲೆ ಶಾಲೆಗೆ ಹೋಗುವ ಶಿಕ್ಷಕರು ಪಠ್ಯದಲ್ಲಿನ ವಿಷ್ಯಯವನ್ನು ಹೇಳದೆ ಬೇರೆ ಹೇಳಿಕೊಡುತ್ತಾರೆ ಇದಲ್ಲಿಂದ ಮಕ್ಕಳಿಗೆ ಪಠ್ಯದ ವಿಷಯದ ಕುರಿತು ಅಷ್ಟಾಗಿ ತಿಳಿಯುತ್ತಿಲ್ಲಾ ಎನ್ನುವ ಆರೋಪ ಕೇಳಿಬಂದಿವೆ.
ಶಿಕ್ಷಣ ಇಲಾಖೆ ಹೇಳೊದೆ ಒಂದು ಮಾಡೋದು ಮತ್ತೊಂದು ಎನ್ನವಂತಾಗಿದ್ದು, ಶಾಲೆ ಆರಂಭದ ದಿನವೇ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಹಾಗೂ ಪಠ್ಯಪುಸ್ತಕ ಕೊಡುತ್ತೇವೆ ಎಂದು ಹೇಳಲಾಗಿತ್ತು. ಆದರೆ ಅದೇ ಹಾಡು ಅದೇ ಕಥೆ ಶುರುಮಾಡಿದೆ.
ತಾಲೂಕಿನ ದೋರನಹಳ್ಳಿ, ವಡಗೇರ, ಬುದನೂರ ಸೇರಿ ಹಲವೇಡೆ ಅನಧೀಕೃತ ಕೋಚಿಂಗ್ ಶಾಲೆಗಳಿಗೆ ಬೇಟಿ ನೀಡಿ ಪರಿಶೀಲಿಸಿ ನೋಟಿಸ್ ನೀಡಲಾಗಿದೆ. ಈ ಕುರಿತು ಮತ್ತಷ್ಟು ಗಂಭೀರವಾಗಿ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಾಯ್.ಎಸ್.ಹರಗಿ ಹೇಳಿದ್ದಾರೆ.
