ಬೆಂಗಳೂರು: ಉಬಂಟು ಮಹಿಳಾ ಉದ್ಯಮ ಒಕ್ಕೂಟ ವತಿಯಿಂದ ಗುರುವಾರ ಮಹಾಲಕ್ಷ್ಮಿ ಬಡಾವಣೆ ಬಡಾವಣೆಯಲ್ಲಿ ನಡೆದಿರುವ ಮಹಿಳಾ ಉದ್ಯಮಿಗಳಿಗಾಗಿ ನಡೆಯುತ್ತಿರುವ ಸುಧಾರಿತ ಡಿಜಿಟಲ್ ಪರಿವರ್ತನಾ ತರಬೇತಿ ಕಾರ್ಯಕ್ರಮ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನೆ ಮತ್ತು ಸಮಾರೋಪ ಕಾರ್ಯಕ್ರಮವನ್ನು ಉಬುಂಟು ಸಂಸ್ಥೆಯ ಅಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ರತ್ನಪ್ರಭಾ ಕೆ ರವರು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಡಾ. ರಾಜನ್ ಸುದೇಶ್ ರತ್ನ ಮುಖ್ಯಸ್ಥರು ಯುನೆಸ್ಕೋ, ಶ್ರೀಮತಿ ಮಿಕ್ಕೂ ತನಕ ಮುಖ್ಯಸ್ಥರು ಯುಎನ್, ಪದ್ಮನಾಭ ಮುಖ್ಯಸ್ಥರು ಲೆಕ್ಷಿಪ್, ಶ್ರೀಮತಿ ಜ್ಯೋತಿ ಬಾಲಕೃಷ್ಣ ಉಬುಂಟು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ಹಲವಾರು ಮಹಿಳಾ ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
