ಶಹಾಪುರ: ಇತ್ತಿಚೆಗೆ ಪ,ಜಾ, ಕೇರಿಯಿಂದ ಮುಖ್ಯ ರಸ್ತೆಗೆ ಹಾಯ್ದು ಬರುವ ರಸ್ತೆ ನಿರ್ಮಾಣ ಸಂಭಂಧ ಸವರ್ಣಿಯರ ಮತ್ತು ದಲಿತರ ಮಧ್ಯ ವಾದ ವಿವಾದಗಳು ನಡೆದಾಗ ಅಲ್ಲಿನ ಸವರ್ಣಿಯರು ಜಾತಿ ನಿಂದನೆ ಮಾಡಿ ಬೈದಿದ್ದಾರೆ, ಎಂದು ಆರೋಪಿಸಿ ಬಸವರಾಜ ತಂದೆ ಮರೆಪ್ಪ ನಾಟೇಕಾರ ಎನ್ನುವರು ಶಹಾಪುರ ಪೊಲಿಸ್ ಠಾಣೆಗೆ ದೂರೂ ನೀಡಿದ್ದರು.
ನಂತರದಲ್ಲಿ ದಲಿತ ಮುಖಂಡರಾದ ಮಲ್ಲಿಕಾರ್ಜುನ ಪೂಜಾರಿ, ಶ್ರೀ ಶೈಲ್ ಹೊಸಮನಿ, ಶಿವುಕುಮಾರ ತಳವಾರ, ಶಿವುಪುತ್ರ ಜವಳಿ, ನಾಗಣ್ಣ ಬಡಿಗೇರ, ಶರಣು ದೊರನಳ್ಳಿ, ಮಾಳಪ್ಪ ಸಲಾದಪುರ, ಚಂದ್ರಕಾ ರಸ್ತಾಪುರ, ನಾಗರಾಜ ಬೊಮನಳ್ಳಿ, ಶಿವು ಪೊತೆ,ಮೌನೇಶ ಜಾರಕಿಹೊಳಿ, ಶರಣು ಬೇವಿನಳ್ಳಿಯವರು ಶಹಾಪುರ ಠಾಣೆಗೆ ಬೇಟ್ಟಿ ನೀಡಿ, ಪ್ರಕರಣ ದಾಖಲಸಿಕೊಳ್ಳಲು ಒತ್ತಾಯಿಸಿದರು. ಈ ಹಿನ್ನಲೆಯಲ್ಲಿ, 7 ಜನರ ವಿರುದ್ದ ಜಾತಿನಿಂದನೆ ಕಾಯ್ದೆಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಮುಂದೆ ದಲಿತರ ಮೇಲಿನ ದೌರ್ಜನ್ಯ ತಡೆಯಲು ಪೋಲಿಸ್ ಬಂದೋಬಸ್ತು ರಕ್ಷಣೆ ನೀಡಿ ಬೇಕು, ಎಂದು ಮುಕಂಡರು ಆಗ್ರಹಿಸಿದ್ದಾರೆ.
