ಬೆಂಗಳೂರು: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಇಂದು (ಶನಿವಾರ ಜೂನ್ 21) ಬೊಮ್ಮನಹಳ್ಳಿಯ ಎಚ್ಎಸ್ಆರ್ ಬಡಾವಣೆಯಲ್ಲಿ ಇರುವ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಸಮೂಹಿಕ ಯೋಗ ಕಾರ್ಯಕ್ರಮದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವಂತಹ ಎಂ ಸತೀಶ್ ರೆಡ್ಡಿ ಅವರು ಭಾಗವಹಿಸಿದರು.
ನಂತರ ಮಾತನಾಡಿದ ಅವರು, ಯೋಗ ಪಟುಗಳು, ಆರೋಗ್ಯ ಪ್ರೀತಿಸುವ ಎಲ್ಲಾ ಜನರೊಂದಿಗೆ ಈ ಪವಿತ್ರ ಯೋಗ ದಿನವನ್ನು ಆಚರಿಸುವ ಅವಕಾಶ ದಕ್ಕಿದುದು ನಿಜಕ್ಕೂ ಆತ್ಮತೃಪ್ತಿಕರವಾಗಿದೆ. ಯೋಗವು ಕೇವಲ ವ್ಯಾಯಾಮವಲ್ಲ, ಅದು ಮಾನಸಿಕ ಸಮತೋಲನ, ಶಾಂತಿ ಮತ್ತು ಆರೋಗ್ಯದ ದಾರಿ. ಪ್ರತಿದಿನದ ಜೀವನದಲ್ಲಿ ಯೋಗವನ್ನು ಅಳವಡಿಸೋಣ, ಆರೋಗ್ಯಪೂರ್ಣ ಸಮಾಜವನ್ನು ಕಟ್ಟೋಣ ಎಂದರು. ಇದನ್ನೂ ಓದಿ: ಯೋಗ ಇದೊಂದು ಪುರಾತನವಾದ ಆರೋಗ್ಯ ಕ್ರಮ: ಹೆಚ್ ಸಿ ಮಾದೇವಪ್ಪ
ಈ ಕಾರ್ಯಕ್ರಮದಲ್ಲಿ ಹಲವಾರು ಯೋಗಪಟುಗಳು, ಯೋಗ ಗುರುಗಳು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.
