ಬೆಂಗಳೂರು: ಈ ಬಾರಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18 ವರ್ಷದ ನಂತರ ಕಪ್ ಗೆಲ್ಲುವ ಮೂಲಕ ಆರ್ಸಿಬಿ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಇನ್ನು ಆರ್ಸಿಬಿ ಕಪ್ ಗೆದ್ದ ಮೇಲೆ ಆರ್ಸಿಬಿ ಫ್ರಾಂಚೈಸಿ ಮಾರಾಟಕ್ಕಿದೆ ಎಂಬುದು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗುತ್ತಿದೆ.
ಆದರೆ ಆರ್ಸಿಬಿ ಫ್ರಾಂಚೈಸಿ ಮಾರಾಟದ ಕುರಿತು ಆರ್ಸಿಬಿ ಫ್ರಾಂಚೈಸಿ ಯಾವುದೇ ರೀತಿ ಅಧಿಕೃತ ಮಾಹಿತಿ ಪ್ರಕಟಣೆಗೊಂಡಿಲ್ಲ.
ಇನ್ನು ಆರ್ಸಿಬಿ ತಂಡವನ್ನು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಖರೀದಿ ಮಾಡಲಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ದೆಹಲಿಯಲ್ಲಿ ಡಿಸಿಎಂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ನನಗೆ ಆರ್ಸಿಬಿ ತಂಡ ಬೇಕು, ಆದರೆ ನಾನು ಅದನ್ನು ಖರೀದಿಸುವುದಿಲ್ಲ ನನಗೆ ಸಮಯವಿಲ್ಲ. ನನ್ನ ವಿದ್ಯಾಸಂಸ್ಥೆಗಳನ್ನು ನೋಡಿಕೊಳ್ಳಲೇ ನನಗೆ ಸಮಯವಿಲ್ಲ. ಹಾಗಾಗಿ ನಾನು ಯಾವುದೇ ತಂಡವನ್ನು ಖರೀದಿಸುವುದಿಲ್ಲ ಎಂದು ಸ್ಪಷ್ಟ ಮಾಹಿತಿ ನೀಡಿದ್ದಾರೆ.
ನಾನು ರಾಯಲ್ ಚಾಲೆಂಜ್ ವಿಸ್ಕಿಯನ್ನು ಕುಡಿಯಲ್ಲ. ನಾನು ಹುಚ್ಚನೂ ಅಲ್ಲ. ನನಗೇಕೆ RCB ಟೀಮ್ ಬೇಕು? RCB ಟೀಮ್ ಅನ್ನು ನಾನು ಖರೀದಿಸುತ್ತಿಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಆರ್ಸಿಬಿ ತಂಡ ಮಾರಾಟ..!?
ನಾನು KSCA ಸದಸ್ಯ ಮಾತ್ರ. ಈ ಹಿಂದೆ ನನಗೆ ಕೆಎಸ್ಸಿಎ ಮ್ಯಾನೇಜ್ಮೆಂಟ್ಗೆ ಸೇರುವ ಆಫರ್ ಬಂದಿತ್ತು. ಆದರೆ ನನಗೆ ಸಮಯವಿಲ್ಲ. ನನಗೆ ಸಮಯವಿಲ್ಲದ ಕಾರಣ ತಾನು ಆರ್ಸಿಬಿ ಟೀಮ್ ಖರೀದಿಸುತ್ತಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
