ಶಹಾಪುರ: ಜಿಲ್ಲೇಯಾದ್ಯಂತ ಬೆಂಕಿ ಹೊತ್ತಿಸಿರುವ ಅವಹೇಳನಕಾರಿ ಹೇಳಿಕೆಯಿಂದ ಎಲ್ಲೇಡೆ ಮತ್ತಷ್ಟು ಕಾವು ಹೆಚ್ಚಾಗಿದ್ದು, ಕೃಷಿ ಪರಿಕರ ಮಾರಾಟಗಾರರು ರೈತ ಮುಖಂಡ ಚೆನ್ನಪ್ಪ ಆನೇಗುಂದಿ ಕ್ಷೆಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದು, ಇನ್ನೊಂದೆಡೆ ಆರೋಪ ಸಾಬೀತುಪಡಿಸಿ, ಕ್ಷೆಮೆ ಯಾಚಿಸಲು ಸಾಧ್ಯವೆ ಇಲ್ಲಾ ಎಂದು ರೈತ ಮುಖಂಡ ಚೆನ್ನಪ್ಪ ಆನೇಗುಂದಿ ಗುಡುಗುತ್ತಿದ್ದು, ಇವರ ನಡುವೆ ರೈತರ ಸ್ಥೀತಿ ಅಯೋಮಯವಾಗಿದೆ.
ಬೀಜ, ರಸಗೊಬ್ಬರ ಅಂಗಡಿಗಳನ್ನು ಬಂದ್ ಮಾಡಿಕೊಂಡಿರುವ ಮಾಲೀಕರು, ಸ್ವಯಂ ಪ್ರೇರಿತವಾಗಿ ಬೀಜ, ರಸಗೊಬ್ಬರ ಅಂಗಡಿಗಳು ಬಂದ್ ಮಾಡುವಂತೆ ಆದೇಶವೇ ಇಲ್ಲಾ. ಮಾಡಿದರು 2 ದಿನದೊತ್ತಿಗೆ ಮಾತ್ರ, ಅದೂ ಬಿಟ್ಟು 2 ದಿನಕ್ಕಿಂತಲೂ ಹೆಚ್ಚು ಬಂದ್ ಮಾಡಿದ್ದೇ ಆದರೆ ಕ್ರಮ ತೆಗೆದುಕೊಳ್ಳುವ ಆದೇಶವಿದೆ ಎಂದು ಕೃಷಿ ಅಧಿಕಾರಿಯೊಬ್ಬರು ತಿಳಿಸಿದರು.
ಕ್ಷೇಮೆಯಾಚಿಸುವ ಮಾತೆ ಇಲ್ಲಾ
ಗೊಬ್ಬರ ಅಂಗಡಿ ಮಾಲೀಕರಿಗೆ 10 ಲಕ್ಷ ರೂ. ಹಣದ ಬೇಡಿಕೆ ಇಟ್ಟಿದ್ದೇನೆ ಎಂದು ನನ್ನ ವಿರುದ್ಧ ಆರೋಪ ಮಾಡಿದ್ದು, ಇದು ಸತ್ಯಕ್ಕೆ ದೂರವಾದದ್ದು, ಬಸನಗೌಡ ಪೊಲೀಸ್ ಪಾಟೀಲ್ ಮರಕಲ್ ಅವರೇ ಬನ್ನಿ ಈ ಬಗ್ಗೆ ಸಾಬೀತು ಪಡಿಸಲು ನಾನು ತಯಾರಿದ್ದೆನೆ. ಯಾರಿಗೂ ಕ್ಷೇಮೆ ಕೇಳುವ ಪರಿಯೇ ಇಲ್ಲಾ. ನನ್ನ ಹೋರಾಟದ ಜೀವನದಲ್ಲಿ ಎಲ್ಲಯೂ ನನಗೆ ಈ ರೀತಿಯ ಆರೋಪ ಬಂದಿಲ್ಲಾ. ರೈತ ಪರ ಹೋರಾಟಕ್ಕೆ ಕಪ್ಪು ಚುಕ್ಕೆ ಹಿಡುವ ಕೆಲಸ ಮಾಡುತ್ತಿದ್ದಾರೆ ಎಂದು ರೈತ ಮುಖಂಡರಾದ ಚೆನ್ನಪ್ಪ ಆನೇಗುಂದಿ ಹೇಳಿದರು.
ಜಿಲ್ಲೆಯಾದ್ಯಂತ ರಾಜಕೀಯ ನಾಯಕರ ಪ್ರೇರಣೆಯಿಂದ ಸಂಘಟನಾ ಹೋರಾಟಗಳನ್ನು ಮತ್ತು ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ನೊಂದವರ, ಕಾರ್ಮಿಕರು ಮತ್ತು ಬಡವರ ಪರವಾಗಿ ಸುಮಾರು 40 ವರ್ಷಗಳಿಂದ ಹೋರಾಟ ಮಾಡುತ್ತ ಬಂದಿರುವ ಆನೇಗುಂದಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು ಖಂಡನೀಯ, ಅವರ ಹೋರಾಟಕ್ಕೆ ದಲಿತ ಸಂಘರ್ಷ ಸಮಿತಿಯ ಬೆಂಬಲವಿದೆ ಎಂದು ಡಿಎಸ್ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಹೊನ್ನಪ್ಪ ಗಂಗನಾಳ ಹೇಳಿದರು.
ರೈತರಿಗೆ ಆದ ಅನ್ಯಾಯದ ಕುರಿತು ಮಾತನಾಡುವುದೇ ತಪ್ಪಾ
ರೈತರಿಗೆ ಆದ ಅನ್ಯಾಯದ ಕುರಿತು ಮಾತನಾಡುವುದೇ ತಪ್ಪಾ?. ಓರ್ವ ಹೋರಾಟಗಾರ ಯಾವತ್ತಿಗೂ ತನ್ನ ಸ್ವಂತಕ್ಕಾಗಿ ಹೋರಾಟ ಮಾಡುವುದಿಲ್ಲಾ. ಇದನ್ನು ಕೃಷಿ ಪರಿಕರ ಮಾರಾಟಗಾರರು ತಿಳಿದುಕೊಳ್ಳಬೇಕು. ಕಳೆದ ಮುಂಗಾರು ಸಮಯದಲ್ಲಿ ನಕಲಿ ಬೀಜ ಮಾರಾಟದಿಂದ ಬೆಳೆ ಕೈಗೆ ಬಾರದೆ ಸಾಲಕ್ಕೆ ಎಷ್ಟೋ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸುವವರ ವಿರುದ್ಧವೇ ದೂರು ನೀಡಿ ಹೋರಾಟಗಾರರನ್ನು ಕುಗ್ಗಿಸುವ ಕೆಲಸ ನಡೆಯುತ್ತಿದ್ದು. ಇದಕ್ಕೆ ಬಗ್ಗುವುದಿಲ್ಲಾ. ರೈತರ ಹೋರಾಟಕ್ಕೆ ನಮ್ಮ ಕರ್ನಾಟಕ ಸೇನೆಯ ಸಂಪೂರ್ಣ ಬೆಂಬಲವಿದೆ ಎಂದು ನಮ್ಮ ಕರ್ನಾಟಕ ಸೇನೆಯ ರಾಜ್ಯ ಸಂಚಾಲಕ ಭೀಮಣ್ಣ ಶಖಾಪುರ ಹೇಳಿದರು.
ಭೀಮರಾಯನಗುಡಿಯಲ್ಲಿ ನಡೆದ ಮುಂಗಾರು ಹಬ್ಬ ಕಾರ್ಯಕ್ರಮದಲ್ಲಿ ಸಚಿವರು ನಕಲಿ ರೈತರು ಮುಖಂಡರ ಬಗ್ಗೆ ಎಚ್ಚರ ವಿರಲಿ ಎಂದು ಹೇಳಿಕೆ ನೀಡಿದ್ದು, ನಕಲಿ ರೈತ ಮುಖಂಡರು, ನಕಲಿ ಬೀಜಗಳ ಬಗ್ಗೆ ಅವರ ಗಮನಕ್ಕಿದೆ ಎಂದು ಸ್ಪಷ್ಟವಾಗಿದ್ದು, ನಕಲಿಗಳ ವಿರುದ್ಧ ಕ್ರಮ ಯಾಕೆ ಆಗುತ್ತಿಲ್ಲಾ ಎಂದು ಕಾರ್ಮಿಕ ಸಂಘದ ಮುಖಂಡರರಾದ ದಾವಲ್ಸಾಬ್ ನದಾಫ್ ಪ್ರಶ್ನಿಸಿದರು. ಇದನ್ನೂ ಓದಿ: ಜಿಲ್ಲೆಯಾದ್ಯಂತ ಕಿಚ್ಚು ಹಚ್ಚಿದ ಅವಹೇಳನಕಾರಿ ಹೇಳಿಕೆ
ರೈತ ಪರ ಹೋರಾಟಗಾರ ಚೆನ್ನಪ್ಪ ಆನೇಗುಂದಿ ಅವರು ಸದಾ ಬಡವರ ಪರ ಹೋರಾಟ ಮಾಡುತ್ತಾ, ನಿಸ್ವಾರ್ಥ ಸೇವೆ ಸಲ್ಲಿಸುತ್ತ ಬಂದಿದ್ದು, ನಕಲಿ ಬೀಜಕ್ಕೆ ಎಷ್ಟೋ ರೈತರ ಸಾವಿಗೀಡಾಗಿದ್ದಾರೆ. ಸುಳ್ಳು ಕಣ್ಣೇದುರೆ ತಾಂಡವವಾಡುತ್ತಿದ್ದು ಇದಕ್ಕೆ ಸಾಕ್ಷಿಯ ಅಗತ್ಯವಿಲ್ಲಾ. ಅವರ ಮೇಲಿನ ದೂರು ಖಂಡನೀಯವಾದದ್ದು, ರೈತರ ಹೋರಾಟಕ್ಕೆ ನಮ್ಮ ಸಂಘದ ಬೆಂಬಲವಿದೆ ಎಂದು ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ
ಪ್ರದೀಪ್ ಅಣಬಿ ಹೇಳಿದರು.
