Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಜಿಲ್ಲೆಯಾದ್ಯಂತ ಕಿಚ್ಚು ಹಚ್ಚಿದ ಅವಹೇಳನಕಾರಿ ಹೇಳಿಕೆ
  • State

ಜಿಲ್ಲೆಯಾದ್ಯಂತ ಕಿಚ್ಚು ಹಚ್ಚಿದ ಅವಹೇಳನಕಾರಿ ಹೇಳಿಕೆ

admin June 4, 2025 1 minute read
Spread the love

ಶಹಾಪುರ: ಮಂಗಳವಾರ (ಜೂನ್‌ 03) ರಂದು  ಭೀಮರಾಯನ ಗುಡಿಯಲ್ಲಿ ಕೃಷಿ ಇಲಾಖೆ ವತಿಯಿಂದ ನಡೆದ ಮುಂಗಾರು ಹಬ್ಬ ಕಾರ್ಯಕ್ರಮದಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ರೈತ ಮುಖಂಡ ಚೆನ್ನಪ್ಪ ಆನೇಗುಂದಿ ಅವರು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆಂದು ಈಗಾಗಲೇ ದೂರು ದಾಖಲಾಗಿದ್ದು ಇಂದು (ಬುಧವಾರ ಜೂ.04) ರಂದು ನಗರದಲ್ಲಿನ ಎಲ್ಲಾ ಕೃಷಿ ಪರಿಕರ ಮಾರಾಟಗಾರರು ಅಂಗಡಿಗಳನ್ನು ಬಂದ್ ಮಾಡಿದ್ದರು.

ಇದರಿಂದ ನಗರಕ್ಕೆಂದು ಬೀಜ, ರಸಗೊಬ್ಬರ ಖರೀದಿಗೆ ಬಂದಿದ್ದ ಅನ್ನದಾತರು ಸಪ್ಪೇ ಮೋರೆ ಹಾಕಿ ವಾಪಸ್ ತೆರಳಿದರು. ಈಗಾಗಲೇ ಮುಂಗಾರಿಗೂ ಮುನ್ನವೇ ಹೆಚ್ಚು ಮಳೆಯಾಗಿದ್ದು ರೈತರು ಬಿತ್ತನೆಗೆ ಉತ್ಸುಕರಾಗಿದ್ದು, ಬೀಜ, ರಸಗೊಬ್ಬರ ಖರೀದಿಯಲ್ಲಿ ನಿರತರಾಗಿದ್ದರು ಆದರೆ ಬುಧವಾರ ತಾಲೂಕಿನೆಲ್ಲೇಡೆ ಬೀಜದ ಅಂಗಡಿಗಳು ಬಂದ್ ಆಗಿದ್ದನ್ನು ಕಂಡು ವಾಪಸ್ ಗ್ರಾಮಗಳಿಗೆ ತೆರಳಿದರು. ಇನ್ನು ಪಟ್ಟು ಬಿಡದ ಕೃಷಿ ಪರಿಕರಗಳ ಮಾರಾಟಗಾರರು ಅಂಗಡಿಗಳನ್ನೂ ಬಂದ್ ಮಾಡಿದ್ದು, ಇದರಿಂದ ರೈತರಿಗೆ ಪೆಟ್ಟು ಬಿದ್ದಿದೆ.

ಒಂದು ಕ್ಷೇಮೆ ಯಾಚಿಸಿ, ಇಲ್ಲವೇ ಬಂಧನ ಮಾಡಿ

ಕೃಷಿ ಪರಿಕರ ಮಾರಾಟಗಾರರಿಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಈಗಾಗಲೇ ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೈತ ಸಂಘದ ಮುಖಂಡ ಚೆನ್ನಪ್ಪ ಆನೇಗುಂದಿ ಅವರು ಸಾರ್ವಜನಿಕವಾಗಿ ಕ್ಷೇಮೆಯಾಚಿಸಬೇಕು, ಇಲ್ಲವೇ ಪೊಲೀಸರು ಬಂಧಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ 1 ತಿಂಗಳು ಕಳೆದರು ನಾವು ಅಂಗಡಿಗಳನ್ನು ತೆರೆಯುವ ಮಾತೆ ಇಲ್ಲಾ. ಇದು ಕೇವಲ ತಾಲೂಕಿನಲ್ಲಿ ಅಷ್ಟೇ ಅಲ್ಲಾ, ಇಡೀ ಜಿಲ್ಲೆಯಾದ್ಯಂತ ಕೃಷಿ ಪರಿಕರಗಳ ಮಾರಾಟಗಾರರು ಅಂಗಡಿ ತೆಗೆಯುವುದಿಲ್ಲ ಎಂದು ಕೃಷಿ ಪರಿಕರ ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷರಾದ ಬಸನಗೌಡ ಹೇಳಿದರು.

ದೂರು-ಪ್ರತಿದೂರು

ಮುಂಗಾರು ಹಂಗಾಮಿನಲ್ಲಿ ಕೃತಕ ರಸಗೊಬ್ಬರ ಅಭಾವ ಹಾಗೂ ನಕಲಿ ಬೀಜ ಮಾರಾಟ ಮಾಡುವ ಬೀಜ ಹಾಗೂ ರಸಗೊಬ್ಬರ ಮಾರಾಟ ಮಾಡುವ ಮಾಲೀಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರೈತ ಮುಖಂಡ ಚೆನ್ನಪ್ಪ ಆನೇಗುಂದಿ ಅವರು ಭೀಮರಾಯನಗುಡಿ ಮುಂಗಾರು ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡುವಾಗ ಕೃಷಿ ಪರಿಕರ ಮಾರಾಟಗಾರರಾದ ಬಸನಗೌಡ ಮರಕಲ್ ಹಾಗೂ ಅಶೋಕರೆಡ್ಡಿ ಲಿಂಗದಳ್ಳಿ ಅವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ರೈತ ಮುಖಂಡ ಭೀಮಣ್ಣ ಟಪ್ಪೇದಾರ ಸಿಪಿಐ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಕನ್ನಡ ಧ್ವಜ ನೀಡಿ ಸ್ವಾಗತಿಸಿದ ಡಿಸಿಎಂ..!

ಪ್ರತಿಭಟನೆಗೆ ಕರೆ

ಶುಕ್ರವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದು, 2 ಸಾವಿರಕ್ಕೂ ಹೆಚ್ಚು ರೈತ ಮುಖಂಡರು, ಅನ್ನದಾತರು, ಪ್ರಗತಿಪರ ಚಿಂತಕರು, ವಿವಿಧ ಸಂಘಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಈ ಕುರಿತು ಎಸ್.ಪಿ ಅವರಿಗೂ ಸಹ ದೂರು ನೀಡಲಾಗುವುದು. ಕೃಷಿ ಪರಿಕರ ಮಾರಾಟಗಾರ ಸಂಘದ ಜಿಲ್ಲಾಧ್ಯಕ್ಷ ಬಸನಗೌಡ ಹಾಗೂ ತಾಲೂಕ ಅಧ್ಯಕ್ಷ ಅಶೋಕರೆಡ್ಡಿ ಲಿಂಗದಳ್ಳಿ ಅವರ ಮೇಲೆ ದೂರು ದಾಖಲಾಗಬೇಕು ಮತ್ತು ಪಿಎಸ್‌ಐ ಅವರನ್ನು ಅಮಾನತು ಮಾಡಬೇಕು. ಬೀಜ, ಗೊಬ್ಬರ ಕ್ರಿಮಿನಾಶಕಗಳ ಮೇಲೆ ರೇಟ್ ಬೋರ್ಡ್ ಹಾಕಬೇಕು ಮತ್ತು ಸ್ಟಾಕ್ ಬೋರ್ಡ್ ಹಾಕಬೇಕು. ಕಡ್ಡಾಯವಾಗಿ ರಸೀದಿ ಕೊಡಬೇಕು ಎನ್ನುವ ನಿಟ್ಟಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಎಸ್.ಎಂ ಸಾಗರ್ ಹೇಳಿದರು.

 

About the Author

admin

Administrator

Visit Website View All Posts

Spread the love

Post navigation

Previous: ಆರ್‌ಸಿಬಿ ಫ್ಯಾನ್ಸ್‌ ನೂಕು ನುಗ್ಗಲಿಗೆ ಸಾವಿನ ಸಂಖ್ಯೆ ಏರಿಕೆ
Next: ಇಂದು ವಿಶ್ವ ಪರಿಸರ ದಿನ

Views:

7

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.