Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಐಪಿಎಲ್ ಕಪ್ಪಿಗೆ ಮುತ್ತಿಕ್ಕಿದ ಬೆಂಗಳೂರು ಬಾಯ್ಸ್
  • Cricket
  • Front news
  • IPL
  • National
  • Sports

ಐಪಿಎಲ್ ಕಪ್ಪಿಗೆ ಮುತ್ತಿಕ್ಕಿದ ಬೆಂಗಳೂರು ಬಾಯ್ಸ್

admin June 4, 2025
Spread the love

ಬೆಂಗಳೂರು: ಬರೋಬ್ಬರಿ 18 ವರ್ಷಗಳ ವನವಾಸಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಕೊಟ್ಯಾಂತರ ಅಭಿಮಾನಿಗಳ 18 ವರ್ಷದ ಕನಸನ್ನ ಆರ್‌ಸಿಬಿ ತಂಡ ಈ ಬಾರಿ ನನಸು ಮಾಡಿದೆ. ಫೈನಲ್‌ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರೋಚಕವಾಗಿ ಬಗ್ಗುಬಡಿದಿದೆ. ಆ ಮೂಲಕ ಆರ್‌ಸಿಬಿ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿ ಪ್ರತೀ ವರ್ಷವೂ ಈ ಸಲ ಕಪ್‌ ನಮ್ದೇ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್‌ ನೀಡಿದೆ.

ಹೌದು…. ಆರ್‌ಸಿಬಿ ತನ್ನ ಸುಧೀರ್ಘ 18 ವರ್ಷದ ಜರ್ನಿಯಲ್ಲಿ 4 ಬಾರಿ ಪೈ ನಲ್‌ ಪ್ರವೇಶಿಸಿದ್ದು, 2009, 2011, 2016ರ ಫೈನಲ್‌ ಪಂದ್ಯಗಳಲ್ಲಿ ಸೋತು ಭಾರೀ ನಿರಾಸೆ ಅನುಭವಿಸಿತ್ತು. ಈ ವರ್ಷ 4ನೇ ಬಾರಿ ಫೈನಲ್ ಕಂಟಕದಿಂದ ಮುಕ್ತಿ ಪಡೆದಿದೆ. ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್‌ ಫೈನಲ್‌ನಲ್ಲಿ ಆರ್‌ಸಿಬಿ ಸಂಘಟಿತ ಪ್ರದರ್ಶನ ನೀಡಿ, ಪಂಜಾಬ್‌ ಕಿಂಗ್ಸ್ ತಂಡವನ್ನು ಮಣಿಸಿ, ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ. 4ನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಟ್ರೋಫಿ ಎತ್ತಿ ರಜತ್‌ ಪಾಟಿದಾರ್‌ ನಾಯಕತ್ವದಲ್ಲಿ ಐಪಿಎಲ್‌ ಇತಿಹಾಸ ಪುಟ ಸೇರಿದೆ. ಪ್ರಶಸ್ತಿ ಗೆಲ್ಲುವ ಮೂಲಕ ಚೋಕರ್ಸ್ ಎಂಬ ಹಣೆಪಟ್ಟಿಯನ್ನ ಅಹಮದಾಬಾದ್​​ನ ಮೈದಾನದಲ್ಲಿ ಕಿತ್ತೆಸೆದಿದೆ. 18 ವರ್ಷಗಳಿಂದ ಒಂದೇ ಪ್ರಾಂಚೈಸಿಗಾಗಿ ಆಡಿದ್ದ ಲೆಜೆಂಡ್ ವಿರಾಟ್ ಕೊಹ್ಲಿಗೂ ಅಗತ್ಯವಿದ್ದ ಪ್ರಶಸ್ತಿ ಸಿಕ್ಕೇ ಬಿಟ್ಟಿದೆ. ಈ ಖುಷಿಯಲ್ಲಿ ಕೊಹ್ಲಿ ಹೇಳಿದ ಅದೊಂದು ಮಾತು ಅಭಿಮಾನಿಗಳ ಸಂಭ್ರಮವನ್ನ ಇಮ್ಮಡಿಗೊಳಿಸಿದೆ. ಇದನ್ನೂ ಓದಿ: ಕೊನೆಗೂ ಟ್ರೋಫಿ ಗೆದ್ದ ಆರ್‌ಸಿಬಿ ತಂಡ

ಯೆಸ್‌… ಈ ಸಲ ಕಪ್ ನಮ್ದು..!

ಪಂದ್ಯ ಗೆದ್ದ ನಂತರ ಮಾತನಾಡಿದ ಕೊಹ್ಲಿ ಆರ್‌ಸಿಬಿ ತಂಡ ಪ್ರಶಸ್ತಿ ಗೆಲ್ಲಲು ತಮ್ಮ ಪ್ರಾಣ, ಆತ್ಮವನ್ನೇ ಪಣಕ್ಕಿಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಈ ದಿನ ಬರುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಕೊನೆಯ ಎಸೆತವನ್ನು ಹ್ಯಾಜಲ್​ವುಡ್​ ಬೌಲ್ ಮಾಡಿದಾಗ ಆನಂದವನ್ನ ತಡೆಲಾಗದೇ ಭಾವುಕನಾದೆ. ಆರ್‌ಸಿಬಿಗಾಗಿ ತಾನು ಸಾಧ್ಯವಾದ ಎಲ್ಲವನ್ನೂ ಮಾಡಿದ್ದೇನೆ ಮತ್ತು ಅಂತಿಮವಾಗಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿರುವುದು ಅದ್ಭುತ ಅನುಭವ. ಈ ಸಲ ಕಪ್‌ ನಮ್ದೇ ಅಲ್ಲ… ಈ ಸಲ ಕಪ್‌ ನಮ್ದು ಎಂದು ಉದ್ಘರಿಸಿದರು.

ಅತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಕಪ್‌ಗೆ ಮುತ್ತಿಡುತ್ತಿದ್ದಂತೆ ಇತ್ತ ಅಭಿಮಾನಿಗಳ ಸಂಭ್ರಮ ಸಖತ್ ಜೋರಾಗಿತ್ತು. ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ರಸ್ತೆಗಳಲ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ರು. ಒಟ್ಟಾರೆ ಬರೋಬ್ಬರಿ 18 ವರ್ಷಗಳ ಬಳಿಕ ಆರ್‌ಸಿಬಿ ಅಭಿಮಾನಿಗಳ ಟ್ರೋಫಿಯ ಬರ ನೀಗಿದೆ. ಕಿಂಗ್ ಕೊಹ್ಲಿ ಕಂಡ ಕನಸು ನನಸಾಗಿದೆ.

About the Author

admin

Administrator

Visit Website View All Posts

Spread the love

Post navigation

Previous: ಕೊನೆಗೂ ಟ್ರೋಫಿ ಗೆದ್ದ ಆರ್‌ಸಿಬಿ ತಂಡ
Next: ವಿರಾಟ್ ಕೊಹ್ಲಿಗೆ ಕನ್ನಡ ಧ್ವಜ ನೀಡಿ ಸ್ವಾಗತಿಸಿದ ಡಿಸಿಎಂ..!

Views:

24

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.