ಐಪಿಎಲ್ 2025ರ ಪಂದ್ಯಾವಳಿಯಲ್ಲಿ ಆರ್ಸಿಬಿ ತಂಡವು ಕೊನೆಗೂ ತನ್ನ 18 ವರ್ಷದ ಕನಸನ್ನು ನನಸು ಮಾಡಿಕೊಂಡಿದೆ. ಅಹ್ಮದಾಬಾದ್ ನಲ್ಲಿ ಇರುವ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ಅಂತಿಮ ಹಣ ಹಣೆಯಲ್ಲಿ ಆರ್ಸಿಬಿ ತಂಡ 190 ರನ್ ಗಳಿಸುವ ಮೂಲಕ ಅಂತಿಮ ಕಾದಾಟದಲ್ಲಿ ಟ್ರೋಫಿಗೆ ಮುತ್ತಿಕ್ಕಿದೆ. ಆರ್ ಸಿ ಬಿ ಅಭಿಮಾನಿಗಳ ಕನಸು ಕೊನೆಗೂ ನನಸಾಗಿದೆ.
ಪಂಜಾಬ್ ಕಿಂಗ್ಸ್ ತಂಡವು ಕೂಡ ಕಳೆದ 18 ವರ್ಷಗಳಿಂದ ಟ್ರೋಫಿ ಗೆಲ್ಲುವ ಕನಸು ಇಂದು ನುಚ್ಚುನೂರಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಿರುವುದರಿಂದ ಇಡೀ ದೇಶದಾದ್ಯಂತ ಆರ್ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಆರ್ಸಿಬಿಯು ಇದು ನಡೆದ ಪಂದ್ಯಾವಳಿಯಲ್ಲಿ 190 ರನ್ ಗಳಿಸಿತ್ತು. ಆ ಮೂಲಕ ಪಂಜಾಬ್ ಕಿಂಗ್ಸ್ ಗೆಲುವಿಗೆ 191 ರನ್ ಗಳು ಬೇಕಾಗಿತ್ತು. ಆದರೆ ಆರ್ಸಿಬಿ ಪಡೆಗಳ ಮುಂದೆ ಪಂಜಾಬ್ ಕಿಂಗ್ಸ್ ಮತ್ತೆ ಮಂಡಿ ಊರಿದೆ.
ಕೊನೆಯದಾಗಿ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 184 ರನ್ಗಳಿಸಿ ಶ್ರೇಯಸ್ ಅಯ್ಯರ್ ಪಡೆ ಸೋಲಿಗೆ ಶರಣಾಯ್ತು. ಇದರಿಂದ ವಿರಾಟ್ ಕೊಹ್ಲಿ ಟ್ರೋಪಿಗೆ ಮುತ್ತಿಟ್ಟಿದ್ದಾರೆ.
