ಬೆಂಗಳೂರು: ಐಪಿಎಲ್ 2025 ಫೈನಲ್ ಪಂದ್ಯಾವಳಿಗೆ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸತತ 18 ವರ್ಷಗಳ ಕಾದಾಟದಲ್ಲಿ ಆರ್ ಸಿ ಬಿ ತಂಡವು ನಾಲ್ಕನೇ ಬಾರಿಗೆ ಫೈನಲ್ ಗೆ ಲಗ್ಗೆ ಇಟ್ಟಿದ್ದು, ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಪಂಜಾಬ್ ಕಿಂಗ್ಸ್ ನಡುವೆ ಮುಖಾಮುಖಿಯಾಗಲಿದೆ.
ಇಂದು ನಡೆಯಲಿರುವ ಐಪಿಎಲ್ ಪಂದ್ಯಾವಳಿ ಕುರಿತು ಮಾಜಿ ಆಟಗಾರ ಅನಿಲ್ ಕುಂಬ್ಳೆ ಅವರು ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿ ನಾನು ಐಪಿಎಲ್ ಆಟ ಆಡಿದ್ದೇನೆ. ಹಾಗೆ ಪಂಜಾಬ್ ಕಿಂಗ್ಸ್ ತಂಡದಲ್ಲೂ ಕೂಡ ಐಪಿಎಲ್ ಆಟ ಆಡಿದ್ದೇನೆ ಹಾಗಾಗಿ ಎರಡು ತಂಡಕ್ಕೂ ಆಲ್ ದ ಬೆಸ್ಟ್ ಹೇಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಐಪಿಎಲ್ 2025; ಟ್ರೋಫಿಗೆ ಮುತ್ತಿಕ್ಕೋರ್ಯಾರು?
ಇಂದು ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಯಾರಾದರೂ ಒಬ್ಬರು ವಿನ್ ಆಗಲೇಬೇಕು ಆದರೆ ಆರ್ಸಿಬಿಎ ವಿನ್ ಆಗಲಿ ಎಂದು ಹಾರೈಸುತ್ತೇನೆ ಎಂದರು.
