ಬೆಂಗಳೂರು: ಸಿನಿಮಾ ತಾರೆಯರು ಇತ್ತೀಚಿಗೆ ಕ್ರಿಕೆಟ್ ತಾರೆಯರನ್ನು ಮದುವೆಯಾಗುವುದು ಸರ್ವೆ ಸಾಮಾನ್ಯ ಆಗಿದ್ದು, ಇದೀಗ ಮತ್ತೆ ಕನ್ನಡದ ಖ್ಯಾತ ನಟಿ ಒಬ್ಬರು ಕ್ರಿಕೆಟಿಗರನ್ನ ವರಿಸಲಿದ್ದಾರೆ ಎಂಬ ಮಾಹಿತಿ ಎಲ್ಲೆಡೆ ಗ್ರಾಸವಾಗಿ ಚರ್ಚೆಯಾಗುತ್ತಿದೆ.
ಹೌದು, ಕನ್ನಡದ ಖ್ಯಾತ ನಟ ರಾಮ್ ಕುಮಾರ್ ಅವರ ಪುತ್ರಿ ಧನ್ಯಾ ರಾಮ್ ಕುಮಾರ ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಖ್ಯಾತ ಕ್ರಿಕೆಟಿಗರನ್ನು ಪ್ರೀತಿಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ನಿನ್ನ ಸನಿಹಕೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಧನ್ಯಾ ರಾಮ್ ಕುಮಾರ್ ರವರಿಗೆ ಕ್ರಿಕೆಟ್ ಅಂದ್ರೆ ಇಷ್ಟ. ಐಪಿಎಲ್ ನೋಡುವ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ಪಂದ್ಯ ನೋಡಲು ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದಾರೆ. ಈ ವೇಳೆ ಧನ್ಯ ದೇವದತ್ ಪಡಿಕಲ್ ಜರ್ಸಿ ತೊಟ್ಟು ಗೆಳೆಯರ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಧನ್ಯತಾ ಪಡಿಕ್ಕಲ್ ಜೆರ್ಸಿ ತೊಟ್ಟಿರುವುದನ್ನು ನೋಡಿ ಪ್ರೀತಿಯಲ್ಲಿ ಬಿದ್ರಾ? ಅದು ದೇವದತ್ ಪಡಿಕಲ್ ರವರರೊಂದಿಗೆ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಇದನ್ನೂ ಓದಿ: ದರ್ಶನ್ ಗೆಟಪ್ಗೆ ಫ್ಯಾನ್ಸ್ ಫೀದಾ!
ಇಲ್ಲಿ ಏನೋ ನಡೆಯುತ್ತಿದೆ ಅಂತಾ ಟ್ರೋಲ್ ಪೇಜ್ಗಳು ಪೋಸ್ಟರ್ ಹಾಕಿದ್ದಾರೆ. ದೇವದತ್ ಪಡಿಕ್ಕಲ್ ಬೆಂಗಳೂರು ಹುಡ್ಗ. ಈ ಬಾರಿ ಐಪಿಎಲ್ನಲ್ಲಿ ಶೈನ್ ಆಗುತ್ತಿದ್ದಾರೆ. ವಿರಾಟ್ ಕೊಹ್ಲಿ ದೇದವತ್ ಜೊತೆಯಾಟ ಕ್ರಿಕೆಟ್ ಪ್ರೇಮಿಗಳನ್ನು ಇಂಪ್ರೆಸ್ ಮಾಡಿದೆ. ಇದೀಗ ದೇವದತ್ ಪಡಿಕ್ಕಲ್ ಹಾಗೂ ಧನ್ಯತಾ ನಡುವೆ ಏನೋ ಇದೆ ಎಂಬ ಸುದ್ದಿ ಜೋರಾಗಿ ಹಬ್ಬಿದೆ.

