ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಡೆವಿಲ್ ಸಿನಿಮಾದ ಚಿತ್ರೀಕರಣ ಬರದಿಂದ ಸಾಗುತ್ತಿದ್ದು, ಕಳೆದ ವಾರವಷ್ಟೇ ರಾಜಸ್ಥಾನಕ್ಕೆ ತೆರಳಿದ ಚಿತ್ರತಂಡವು ಮತ್ತೆ ಬೆಂಗಳೂರಿಗೆ ಮರಳಿ ಇದೀಗ ಸದ್ದಿಲ್ಲದೆ ಬೆಂಗಳೂರು ನಗರದಲ್ಲಿಯೇ ಚಿತ್ರಿಕರಣವನ್ನು ಮುಂದುವರಿಸುತ್ತಿದೆ.
ಹೌದು, ಬಹುನಿರೀಕ್ಷಿತ ಡೆವಿಲ್ ಸಿನಿಮಾ ಚಿತ್ರೀಕರಣ ಬರದಿಂದ ಸಾಗುತ್ತಿದ್ದು 4ನೇ ಹಂತದ ಚಿತ್ರೀಕರಣಕ್ಕೆಂದು ಬೆಂಗಳೂರು ನಗರದಲ್ಲಿ ಚಿತ್ರೀಕರಣ ನಡೆಸುತ್ತಿದೆ.
ಇನ್ನು ದರ್ಶನ್ ರವರು ಸಖತ್ ಲುಕ್ಕಿನಲ್ಲಿರುವ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳು ವಿಧ ವಿಧ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಡೆವಿಲ್ ಲುಕ್ ನಲ್ಲಿ ದಾಸ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಶುಭ್ರ ಬಿಳಿಬಣ್ಣದ ಬಟ್ಟೆಯಲ್ಲಿ ಸಖತ್ ಸ್ಟೈಲೀಶ್ ಆಗಿ ದರ್ಶನ್ ಮಿಂಚಿದ್ದು, ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಹಲವು ದಿನಗಳ ನಂತರ ದರ್ಶನ್ ಪವಿತ್ರ ಗೌಡ ಮುಖಾಮುಖಿ!
ಪ್ರಕಾಶ್ ವೀರ್ ನಿರ್ದೇಶನದಲ್ಲಿ ಡೆವಿಲ್ ಸಿನಿಮಾ ತಯಾರಾಗುತ್ತಿದೆ. ದರ್ಶನ್ ಗೆ ಜೋಡಿಯಾಗಿ ಯುವ ನಟಿ ರಚನಾ ರೈ ಅಭಿನಯಿಸುತ್ತಿದ್ದಾರೆ. ಈ ವರ್ಷವೇ ಡೆವಿಲ್ ಸಿನಿಮಾ ತೆರೆಗೆ ಬರಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.
