ಬೆಂಗಳೂರು: ಸಾಮಾನ್ಯವಾಗಿ ಎಲ್ಲರಿಗೂ ವಯಸ್ಸಾದ ಮೇಲೆ ಹೇಗೆ ವಯೋಸಹಜ ಕಾಯಿಲೆಗಳು ಬರುತ್ತವೆ ಅದರಂತೆ ನನಗೂ ಕೂಡ ವಯಸ್ಸಾಗಿದೆ ಹಾಗಾಗಿ ನನಗೂ ಕೂಡ ಶುಗರ್ ಇದೆ ಆದ ಕಾರಣ ನಾನು ಅನ್ನ ತಿನ್ನುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ವಿಧಾನಸೌಧದ ಆವರಣದಲ್ಲಿ ನಡೆದ ಬಾಬು ಜಗಜೀವನರಾಂ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅನ್ನಭಾಗ್ಯದ ಬಗ್ಗೆ ಅವರು ಮಾತನಾಡಿದ ಅವರು, ನನಗೆ ಶುಗರ್ ಇದೆ ಅನ್ನ ತಿನ್ನೋದು ಬಿಟ್ಟಿದ್ದೇನೆ. ಎಲ್ಲರೂ ಸಿರಿಧಾನ್ಯ ಸೇವಿಸಿ ಎಂದು ಹೇಳಿದ್ದಾರೆ. ಎಲ್ಲರೂ ಎರಡು ಹೊತ್ತು ಊಟ ಮಾಡಲೇಬೇಕು ಎಂದು ಅನ್ನಭಾಗ್ಯ ಯೋಜನೆ ತಂದಿದ್ದು, ಇಲ್ಲಿ ಎಷ್ಟು ಜನ ಇದ್ದಾರೋ ಗೊತ್ತಿಲ್ಲ ಅನ್ನ ಉಣ್ಣೋರು. ಜಾತ್ರೆ, ಹಬ್ಬ ಇದ್ದಾಗ ಮಾತ್ರ ನಾವು ಅನ್ನ ಉಣ್ಣೋರು. ನಮಗೆ ಅನ್ನನೇ ಸಿಕ್ತಾನೇ ಇರಲಿಲ್ಲ. ಎಲ್ಲರೂ ಕೂಡ ಅನ್ನ ಉಣ್ಣಲೇಬೇಕೆಂದು ಅನ್ನಭಾಗ್ಯ ಯೋಜನೆ ತಂದಿರೋದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಾಬು ಜಗಜೀವನ್ ರಾಮ್ ದೇಶ ಕಂಡ ಅಪ್ರತಿಮ ನಾಯಕರು: ಸಿಎಂ
ಇದೇ ವೇಳೆ ಅವರ ಆರೋಗ್ಯದ ಬಗ್ಗೆ ಮಾತನಾಡಿ, ನನಗೆ ಈಗ ಶುಗರ್ ಕಾಯಿಲೆ ಬಂದಿದೆ. ನಾನು ಅನ್ನನೇ ತಿನ್ನೋದನ್ನು ಬಿಟ್ಟು ಬಿಟ್ಟಿದ್ದೇನೆ. ಚಪಾತಿ ತಿಂತಾ ಇದೀನಿ. ಸಿರಿ ಧಾನ್ಯಗಳನ್ನೂ ತಿನ್ನುವ ರೂಢಿ ಮಾಡಿಕೊಂಡಿದ್ದೇನೆ ಎಂದಿದ್ದಾರೆ.
