ಬೆಂಗಳೂರು: ಕನ್ನಡ ಚಿತ್ರರಂಗದ ಕ್ಯುಟೆಸ್ಟ್ ನಟಿ ಹಾಗೂ ಅಪ್ಪಟ ಕನ್ನಡತಿ ಅದಿತಿ ಪ್ರಭುದೇವ್ ಅವರ ಮಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿದ್ದು, ಕನ್ನಡ ಚಿತ್ರರಂಗದ ಹಲವು ನಟ, ನಟಿಯರು ಭಾಗಿಯಾಗಿ ಅದಿತಿ ಹಾಗೂ ಶ್ರೇಯಸ್ ಅವರ ಮುದ್ದಾದ ಮಗಳು ನೇಸರಗೆ ಜನ್ಮದಿನದ ಶುಭಕೋರಿದ್ದಾರೆ.
ಅದಿತಿಯವರ ಮಗಳಿಗೆ ಒಂದು ವರ್ಷ ತುಂಬಿದ್ದು ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಬೆಂಗಳೂರಿನಲ್ಲಿರುವ ಖಾಸಗಿ ಹೋಟೆಲ್ ಒಂದರಲ್ಲಿ ನಡೆಸಿದ್ದಾರೆ. ಇದನ್ನೂ ಓದಿ: ರಮ್ಯಾ ಸ್ಟೈಲ್ಗೆ ಫಿದಾ ಆದ ಫ್ಯಾನ್ಸ್
ನೇಸರ ಹುಟ್ಟುಹಬ್ಬಕ್ಕೆ ಕನ್ನಡ ಚಿತ್ರರಂಗದ ನಟ ನೆನಪಿರಲಿ ಪ್ರೇಮ್ ಫ್ಯಾಮಿಲಿ, ಮಿಲನಾ-ಕೃಷ್ಣ ದಂಪತಿ, ನಟಿಯರಾದ ಅಮೃತಾ ಅಯ್ಯಂಗಾರ್, ಮಲೈಕಾ, ನಿರ್ಮಾಪಕ ಬಾ.ಮಾ.ಹರೀಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಅದಿತಿ ಪ್ರಭುದೇವ ಮೂಲತಃ ಬೆಣ್ಣಿ ನಗರಿ ದಾವಣೆಗೆರೆಯವರು 2022ರಲ್ಲಿ ಉದ್ಯಮಿ ಯಶಸ್ ಅವರನ್ನು ಮದುವೆಯಾದರು. 2024ರ ಏಪ್ರಿಲ್ 4ರಂದು ಈ ದಂಪತಿ ಹೆಣ್ಣು ಮಗವನ್ನು ಸ್ವಾಗತಿಸಿದ್ದರು.
