ಬೆಂಗಳೂರು: ನಟ ದರ್ಶನ್ ಅವರು ಡೆವಿಲ್ ಸಿನಿಮಾದ ಚಿತ್ರೀಕರಣಕ್ಕೆಂದು ಕಳೆದ ಒಂದು ವಾರದಿಂದ ರಾಜಸ್ಥಾನದಲ್ಲಿ ಇದ್ದರು.
ರಾಜಸ್ಥಾನದಲ್ಲಿ ಡೆವಿಲ್ ಸಿನಿಮಾದ ಚಿತ್ರೀಕರಣ ನಿನ್ನೆ (ಗುರುವಾರ ಏ. 03) ರಂದು ಮುಕ್ತಾಯಗೊಂಡಿದ್ದು ಇಂದು (ಶುಕ್ರವಾರ ಏಪ್ರಿಲ್ 4) ರಂದು ದರ್ಶನ್ ಹಾಗೂ ವಿಜಯಲಕ್ಷ್ಮಿ ಬೆಂಗಳೂರಿಗೆ ವಾಪಾಸಾಗಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರು ಷರತ್ತು ಬದ್ಧ ಜಾಮೀನು ಮೇಲೆ ಹೊರಬಂದ ಮೇಲೆ ಡೆವಿಲ್ ಸಿನಿಮಾ ಚಿತ್ರೀಕರಣದಲ್ಲಿ ಫುಲ್ ಬ್ಯುಸಿಯಾಗಿದ್ದು, ಅದರಂತೆ ರಾಜಸ್ಥಾನದಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಇದನ್ನೂ ಓದಿ: ರಮ್ಯಾ ಸ್ಟೈಲ್ಗೆ ಫಿದಾ ಆದ ಫ್ಯಾನ್ಸ್
