ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಅವರು ಹಲವು ವರ್ಷಗಳ ನಂತರ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿರುವ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ರಮ್ಯಾ ಸಖತ್ ಸ್ಟೈಲಿಶ್ ಆಗ ಫೋಟೋಶೂಟ್ ಮಾಡ್ಸಿವ ಮೂಲಕ ಮತ್ತೆ ಅಭಿಮಾನಿಗಳ ಮನೆ ಕದ್ದಿದ್ದಾರೆ.
ಹೌದು, ನಟಿ ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಅವರು ಒಂದಲ್ಲ ಒಂದು ಫೋಟೋ ಅಥವಾ ಪೋಸ್ಟ್ ಹಾಕುವ ಮೂಲಕ ಅಭಿಮಾನಿಗಳ ಜೊತೆ ಫುಲ್ ಕನೆಕ್ಟಿವ್ ಆಗಿರುತ್ತಾರೆ.
ಅದರಂತೆ ಇದೀಗ ನಟಿ ರಮ್ಯಾ ಅವರು ಸ್ಟೈಲಿಶ್ ಆಗಿ ಫೋಟೋಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರ ಫೋಟೋಗಳಿಗೆ ವಿಧವಿಧದ ಕಮೆಂಟ್ಸ್ ಗಳು ಬರುತ್ತಿರುವುದರ ಜೊತೆಗೆ ನಟಿ ಸಮಂತಾ ಅವರು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟಾಲಿವುಡ್ನತ್ತ ಮುಖ ಮಾಡಿದ ಧರ್ಮ
ರಮ್ಯಾ ಮಾರ್ಡನ್, ಟ್ರೆಡಿಷನ್ ಎರಡು ಉಡುಗೆಯಲ್ಲಿಯೂ ಗೌರಮ್ಮನ ಗಮ್ಮತ್ತು ಜೋರಾಗಿಯೇ ಇರುತ್ತದೆ.
ಬಿಳಿ ಬಣ್ಣದ ಬ್ಲೇಸರ್, ಡೆನಿಮ್ ಬ್ಯಾಗಿ ಜೀನ್ಸ್ ತೊಟ್ಟು ಕ್ಯೂಟ್ ಆಗಿ ರಮ್ಯಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ರಮ್ಯಾ ಸ್ಟೈಲೀಶ್ ಫೋಟೋಗೆ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ. ವಿಶೇಷ ಅಂದರೆ ಸಮಂತಾ ಹಾರ್ಟ್ ಸಿಂಬಲ್ ಹಾಕಿ ಪದ್ಮಾಪತಿ ಫೋಟೋಗೆ ಕಂಪ್ಲಿಮೆಂಟ್ ಕೊಟ್ಟಿದ್ದಾರೆ.
ಅದೇನಿ ಆಗಲಿ ಸಕ್ಕತ್ ಸ್ಟೈಲಿಶ್ ಆಗಿ ಫೋಟೋಶೂಟ್ ಮಾಡಿಸಿರುವ ರಮ್ಯ ಅವರು ಸಖತ್ ಮುದ್ದಾಗಿ ಕಾಣುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

