ಕೋಲಾರ: ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಶೇಕಡ 4 ರಷ್ಟು ಮೀಸಲಾತಿ ನೀಡಿರುವುದನ್ನು ಖಂಡಿಸಿ ಕೋಲಾರ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂ ಶಕ್ತಿ ಚಲಪತಿ ನೇತೃತ್ವದಲ್ಲಿಂದು (ಬುಧವಾರ ಮಾ. 26) ರಂದು ಬೃಹತ್ ಮಾನವ ಸರ್ಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಲಾಯಿತು. ಇದನ್ನೂ ಓದಿ: ಸ್ಥಳೀಯ ಜನಪ್ರತಿನಿದಿಗಳಿಂದ ಜನರನ್ನು ಹತ್ತಿಕ್ಕುವ ಕೆಲಸ
ಈ ಪ್ರತಿಭಟನೆಯಲ್ಲಿ ಮಾಜಿ ಸಂಸದ ಎಸ್ ಮುನಿ ಸ್ವಾಮಿ, ಮಾಜಿ ಶಾಸಕ ಬಿ ಪಿ ವೆಂಕಟ ಮುನಿಯಪ್ಪ, ವೈ ಸಂಪಂಗಿ ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್, ಬಿಜೆಪಿ ಯುವ ಮೋರ್ಚಾ ಮಹಿಳಾ ಮೋರ್ಚಾ, ಕಾರ್ಮಿಕ ಮೋರ್ಚಾ, ರೈತ ಮೋರ್ಚ, ಮೋರ್ಚಾ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
