Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಸ್ಥಳೀಯ ಜನಪ್ರತಿನಿದಿಗಳಿಂದ ಜನರನ್ನು ಹತ್ತಿಕ್ಕುವ ಕೆಲಸ
  • Bangalore

ಸ್ಥಳೀಯ ಜನಪ್ರತಿನಿದಿಗಳಿಂದ ಜನರನ್ನು ಹತ್ತಿಕ್ಕುವ ಕೆಲಸ

admin March 25, 2025 1 minute read
Spread the love

ಶಹಾಪುರ: ಸ್ಥಳೀಯ ಜನಪ್ರತಿನಿಧಿಗಳು ಕ್ಷೆತ್ರದ ಜನರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದು, ನಿವೇಶನ ಹಕ್ಕು ಪತ್ರದ ಹೆಸರಿನಲ್ಲಿ, ಹಕ್ಕು ದೃಢೀಕರಣ ಪತ್ರವನ್ನು ನೀಡಿ  ಮುಗ್ಧ ಜನರನ್ನು ಯಾಮಾರಿಸುತ್ತಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಅಮೀನ್ ರೆಡ್ಡಿ ಯಾಳಗಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಅಮೀನ್ ರೆಡ್ಡಿ ಯಾಳಗಿ ಅವರ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮ್ಮ ಬೇಳೆ ಬೇಯಿಸಿಕೊಳ್ಳಲು  ಹಕ್ಕು ಪತ್ರದ ಹೆಸರಿನಲ್ಲಿ ಹಕ್ಕು ದೃಢೀಕರಣ ಪತ್ರವೇ ನೀಡಿದ್ದಾರೆ. ಹಕ್ಕು ದೃಢೀಕರಣ ಪತ್ರವೇ ಬೇರೆ ಹಕ್ಕು ಪತ್ರವೇ ಬೇರೆ. ಜನರನ್ನು ವಂಚಿಸುವ ಕೆಲಸ ನಡೆಯುತ್ತಿದ್ದು, ಇದಕ್ಕೆ ಒಂದು ತಿಂಗಳ ಕಾಲ ನೀಡಲಿದ್ದು ಅಷ್ಟರೊಳಗೆ ಹಕ್ಕು ಪತ್ರ ನೀಡುವ ಕೆಲಸ ಮಾಡಿ. ನಗರಸಭೆ ವತಿಯಿಂದ 280ಕ್ಕೂ ಹೆಚ್ಚು ದೃಡೀಕರಣ ಪತ್ರವೆಂದು ಒಂದು ಬಿಳಿ ಹಾಳೆಯ ಮೇಲೆ ಫೋಟೋ ನೀಡಿದ್ದು ಅದು ಎಲ್ಲಿಯೂ ಮಾನ್ಯವಾಗುವುದಿಲ್ಲ. ಫಿಲ್ಟರ್ ಕಾಲೋನಿಯಲ್ಲಿ 30 ವರ್ಷಗಳಿಂದ ವಾಸವಾಗಿರುವ ಜನರಿಗೆ ಉಸ್ತುವಾರಿ ಸಚಿವರು ಈವರೆಗೂ ಹಕ್ಕು ಪತ್ರ ನೀಡಿಲ್ಲ. ಹಕ್ಕು ದೃಢೀಕರಣ ಪತ್ರ ಬದಲು ರಾಜೀವ್ ಗಾಂಧಿ ವಸತಿ ನಿಗಮದಿಂದ ಹಕ್ಕು ಪತ್ರ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಇದನ್ನೂ ಓದಿ: ಚಿಲ್ಲರೆ ವಿಷಯಕ್ಕಾಗಿ ರಕ್ತ ಬರುವಂತೆ ಹೊಡೆದ ಕೆಎಸ್ಆರ್‌ಟಿಸಿ ಬಸ್ ಚಾಲಕ

ಸಂವಿಧಾನಿಕವಾಗಿ ಆಳುವ ಪಕ್ಷಕ್ಕೆ ಕೇಳುವ ಹಕ್ಕು ವಿರೋಧ ಪಕ್ಷಕ್ಕೆ ಇರುತ್ತದೆ. ಆದರೆ ತಾವೇ ಏನೇ ಮಾಡಿದರೂ ಕೇಳಬಾರದೆಂದು ನಮ್ಮ ಪಕ್ಷದ ಮುಖಂಡರಿಗೆ ಮತ್ತು ಕಾರ್ಯಕರ್ತರ ಮನೆಗೆ ಸಚಿವರ ಆಪ್ತ ಬೆಂಬಲಿಗರು ಮತ್ತು ಕಾರ್ಯಕರ್ತರನ್ನು ಕಳುಹಿಸಿ ಬೆದರಿಸುವಂತಹ ಕೆಲಸಗಳು ಸ್ಥಳೀಯ ಜನಪ್ರತಿನಿಧಿಗಳು ಮಾಡುತ್ತಿದ್ದಾರೆ. ಹಕ್ಕು ದೃಢೀಕರಣ ಪತ್ರ ನೀಡಿರುವ ಅಧಿಕಾರಿ ಪೌರಯುಕ್ತ ರಮೇಶ್ ಬಡಿಗೇರ್ ಮತ್ತು ಆಶ್ರಯ ಕಮಿಟಿ ಅಧ್ಯಕ್ಷರ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.  ಮನೆ, ಮನೆಗೆ ನೀರು ಒದಗಿಸುವ ಯೋಜನೆಯ ನೆಪದಲ್ಲಿ ಕಳಪೆ ಕಾಮಗಾರಿ ಮಾಡುತ್ತಿದ್ದು, ಎಲ್ಲೆಂದರಲ್ಲಿ ತೋಡಿ ಹಾಗೆ ಬಿಟ್ಟಿದ್ದು, ಇಡೀ ನಗರವನ್ನೇ ತಗ್ಗು ಪ್ರದೇಶ ಮಾಡಿ ಬಿಟ್ಟಿದ್ದಾರೆ.

ಕಾಮಗಾರಿ ಕ್ರಮಬದ್ಧವಿಲ್ಲ ಇದನ್ನು ಕೇಳಲು ಹೋದರೆ ಜಿಲ್ಲಾ ಉಸ್ತುವಾರಿ ಸಚಿವರ ಸಹೋದರನೇ ಕಾಮಗಾರಿ ಮಾಡುತ್ತಿದಾರೆ ಎಂದು ಹೇಳಿ ಜನರನ್ನು ಬೆದರಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಇದು ಮುಂದುವರೆದರೆ ಜಿಲ್ಲಾ ಉಸ್ತುವಾರಿ ಸಚಿವರ ಮನೆಯಗೆ ಮುತ್ತಿಗೆ ಹಾಕುವುದಕ್ಕೂ ಸಿದ್ಧರಿದ್ದೇವೆ ಎಂದರು.

ಇದರ ಹಿಂದೆ ಪ್ರಭಾವಿ ವ್ಯಕ್ತಿಯೊಬ್ಬರು ಇದ್ದು ಹಕ್ಕುಪತ್ರ ವಿಷಯದಲ್ಲಿ ಸುಖ ಸುಮ್ಮನೆ ಗೊಂದಲ ಸೃಷ್ಟಿಸಿ ಬಿಜೆಪಿ ಕಾರ್ಯಕರ್ತರ ಮನೆಗೆ ಕಳುಹಿಸಿ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಅಸಲಿ ವಿಷಯವೇ ಬೇರೆ ಇದ್ದು,  ಜಿಲ್ಲಾಧಿಕಾರಿಗಳು ಕೂಡಲೇ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ ನೀಡಿರುವ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಅಜೆಂಡಾ ಬಹಿರಂಗವಾಗಿದೆ.  ಡಿಸಿಎಂ ಡಿಕೆ ಶಿವಕುಮಾರ್ ಅವರು ಭಾರತದ ಪ್ರಜಾತಂತ್ರ ವ್ಯವಸ್ಥೆಯ ಸಾರ್ವಭೌಮ ಎಂದು ಗೌರವಿಸುವ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನೇ ತಿದ್ದುಪಡಿ ಮಾಡಿದರೂ ಸರಿ ಮುಸ್ಲಿಮರಿಗೆ ಮೀಸಲಾತಿ ನೀಡುವುದೇ ನಮ್ಮ ಪ್ರಥಮ ಆದ್ಯತೆ, ದೇಶ, ಸಂವಿಧಾನಕ್ಕಿಂತ ಮುಸ್ಲಿಮರಿಗೆ ಮೀಸಲಾತಿ ಕೊಡುವುದು ನಮ್ಮ ಕರ್ತವ್ಯ ಎಂಬ ಹೇಳಿಕೆ ನೀಡಿದ್ದು ಕಾಂಗ್ರೆಸನವರು ಸಂವಿದಾನ ರಕ್ಷಕರು ಅಂತ ಹೇಳಿ ಸಂವಿದಾನವನ್ನೇ ಬದಲಿಸಲು ಹೊರಟಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಬುತಿಹಳ್ಳಿ, ತಿರುಪತಿ ಹತ್ತಿಕಟ್ಟಿಗೆ, ಗುರುಕಾಮ, ಮಲ್ಲಿಕಾರ್ಜುನ ಕಂದಕೂರ ದೇವೇಂದ್ರ ಕೊನೇರ, ಚಂದ್ರು ಯಾಳಗಿ, ಅವಿನಾಶ್ ಗುತ್ತೇದಾರ್ ಸೇರಿದಂತೆ ಅನೇಕರು ಇದ್ದರು.

 

About the Author

admin

Administrator

Visit Website View All Posts

Spread the love

Post navigation

Previous: ರಾಮನಗರ ಜಿಲ್ಲೆ ರೈಲ್ವೆ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ..!
Next: ಕೈ ವಿರುದ್ದ ಬಿಜೆಪಿ ಪ್ರತಿಭಟನೆ

Views:

26

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.