ಬೆಂಗಳೂರು: ಕರ್ನಾಟಕ ಸರ್ಕಾರ ಭೋವಿ ಅಭಿವೃದ್ಧಿ ನಿಗಮದಿಂದ ಬಂಪರ್ ಕೊಡುಗೆಯನ್ನು ನೀಡಿದ್ದು, ನಿಗಮದ ಸಾಕ್ಷ್ಯ ಚಿತ್ರ ನಿರ್ಮಾಣಕ್ಕೆಂದು ಸುಮಾರು ಒಂದು ಕೋಟಿ ರೂ ವೆಚ್ಚ ಮಾಡಲು ಮುಂದಾಗಿದೆ ಎಂಬ ಮಾಹಿತಿ ಇದೀಗ ತಿಳಿದು ಬಂದಿದೆ.
ಹೌದು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಬೋವಿ ಸಮುದಾಯದವರ ಆಚಾರ, ವಿಚಾರ, ಕಲೆ, ಸಂಸ್ಕೃತಿ, ವೃತಿ, ನಿಗಮದ ಯೋಜನೆಗಳ ಚಿತ್ರೀಕರಣ, ಆರ್ಥಿಕ, ಸಾಮಾಜಿಕ ಸ್ವಾವಲಂಬಿಗಳಾಗಿರುವ ಫಲಾನುಭವಿಗಳ ಉತ್ಪಾದಕ ಘಟಕಗಳ ಚಿತ್ರೀಕರಣ, ಇತ್ಯಾದಿಗಳ ಕುರಿತು ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಲಿದೆ. ಇದಕ್ಕಾಗಿ 2024-25ನೇ ಸಾಲಿಗೆ ನಿಗಮದ ವಾರ್ಷಿಕ ಕ್ರಿಯಾ ಯೋಜನೆಯಲ್ಲಿರುವ ಅನುದಾನವನ್ನು ಬಳಕೆ ಮಾಡಿಕೊಂಡಿದೆ. ಒಟ್ಟು ಅನುದಾನದಲ್ಲಿ 1 ಕೋಟಿ ರೂ. ವೆಚ್ಚವನ್ನು ಮಾಡಲಿದೆ. ಇದನ್ನೂ ಓದಿ: ʼದೆಹಲಿʼ ಯಾರು ಏರಲಿದ್ದಾರೆ ಅಧಿಕಾರದ ಗದ್ದುಗೆ?
ಸರ್ಕಾರವು ಇದೀಗ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ಕುರಿತು ಸಾಕ್ಷ್ಯ ಚಿತ್ರ ನಿರ್ಮಾಣಕ್ಕೆ ಸರಿ ಸುಮಾರು 1.00 ಕೋಟಿ ರು. ವೆಚ್ಚ ಮಾಡಲು ಮುಂದಾಗಿದೆ. ಈ ಕುರಿತು 2025ರ ಜನವರಿ 9ರಂದು ಕಾರ್ಯಾದೇಶ ಹೊರಡಿಸಿದೆ.
ವೆಚ್ಚದ ಪಟ್ಟಿಯಲ್ಲೇನಿದೆ?
ಸಮುದಾಯಕ್ಕೆ ಸಂಬಂಧಿಸಿದಂತೆ ಪರಿಕಲ್ಪನೆವಾರು 45 ನಿಮಿಷಗಳ ಅವಧಿಯ ಫಿಲ್ಕ್ ಸಿದ್ಧಪಡಿಸಲು 90,000 ರು, 10-17 ನಿಮಿಷದ ಅಡ್ವಕೇಸಿ ಚಿತ್ರೀಕರಣಕ್ಕೆ 50,000 ರು. ನಿಗಮದ ಅವಲೋಕನ ಕುರಿತು 130 ನಿಮಿಷದ ಚಿತ್ರಕ್ಕೆ 10,00,000 ರು, ಅಲ್ಲದೇ ನಿಗಮದ ಅವಲೋಕನ ಕುರಿತು 25 ನಿಮಿಷದ ಚಿತ್ರಕ್ಕೆ 3,00,000 ರು., ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸ್ಕಿಪ್ಪೆಗಾಗಿ 5,00,000 ರು, ಚಿತ್ರೀಕರಣಕ್ಕೆ (ಮೂರು ಕ್ಯಾಮರಾ – ಡ್ರೋಣ್ ಉಪಕರಣಗಳ ಬಾಡಿಗೆ, ಸಾರಿಗೆ, ವಸತಿ ವ್ಯವಸ್ಥೆಗಾಗಿ 17,00,000 ರೂ, ವೆಚ್ಚ ಮಾಡಲಿದೆ.
ಚಿತ್ರೀಕರಣಕ್ಕೆ ಮತ್ತೆ 3 ಕ್ಯಾಮರಾ, ಡ್ರೋಣ್, ಕ್ಯಾಮರಾಮನ್ ವೃತ್ತಿ ಶುಲ್ಕಕ್ಕೆ 18,00,000 ರು., 4 ಕ್ಯಾಮರಾ, ಮತ್ತು ಡ್ರೋಣ್ ನಿರ್ದೇಶಕ, ಸಹಾಯಕ ನಿರ್ದೇಶಕರ ವೃತ್ತಿಪರ ಶುಲ್ಕಕ್ಕೆ 20,00,000 ರು, ಹಾರ್ಡ್ ಡಿಸ್ಕ್‌ಗಳಿಗಾಗಿ 50,000 ರು., ಅನಿಮೇಷನ್‌ಗೆ 1,00,000 ರು, ಸಂಗೀತಕ್ಕೆ 60,000 ರು, ವಾಕ್ಸ್ ಹಿ ಹಿನ್ನಲೆ ಧ್ವನಿ ಮತ್ತು ಹಿನ್ನಲೆ ಧ್ವನಿ ಚಿತ್ರೀಕರಣಕ್ಕೆ 1,50,000 ರು, ಸಂಕಲನಕ್ಕೆ ಸ್ಟುಡಿಯೋ ಬಾಡಿಗಾಗಿ 1,45,000 ರು, ವಿಡಿಯೋ ಎಡಿಟರ್‌ಗಳಿಗೆ ಶುಲ್ಕವೆಂದು 2,50,000 ರು., ನಿರ್ದೇಶಕರ ಗೌರವ ಧನಕ್ಕೆಂದು 2,75,000 ರು, ಮತ್ತು ಜಿಎಸ್‌ಟಿ ವೆಚ್ಚ ಸೇರಿ ಒಟ್ಟಾರೆ 99,94, 600 ರು. ವೆಚ್ಚದ ಪಟ್ಟಿಯನ್ನು ಒಳಗೊಂಡಿದೆ.
ಈ ವೆಚ್ಚಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
