ದೆಹಲಿ: ಇಂದು ಇಡೀ ದೇಶದ ಜನತೆಯ ಚಿತ್ತ ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶದತ್ತ ಎಂಬಂತಾಗಿದೆ.
ಹೌದು, ಇಂದು ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ಬೆಳಗ್ಗೆ 8:00 ಘಂಟೆ ಇಂದಲೇ ಮತದಾನ ಎಣಿಕೆ ಪ್ರಾರಂಭವಾಗಿದ್ದು ಈ ಬಾರಿ ದೆಹಲಿಯಲ್ಲಿ ಬಿಜೆಪಿ ಪಕ್ಷಾನೇ ಅಧಿಕಾರಕ್ಕೆ ಬರುತ್ತದೆ ಎಂಬ ಮಾಹಿತಿ ಎಲ್ಲೆಡೆ ಬಿತ್ತರವಾಗುತ್ತಿದೆ. ಆದರೆ ಮತದಾನ ಬಾಂಧವರು ಯಾರ ಕೈಹಿಡಿತಾರೆ ಎಂಬುದೇ ಕುತೂಹಲದ ಸಂಗತಿಯಾಗಿದೆ.
ಇನ್ನು ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 5ರಂದು ಮತದಾನ ನಡೆದಿತ್ತು. 70 ಕ್ಷೇತ್ರದ ಫಲಿತಾಂಶ ಇಂದು ಹೊರಬೀಳಲಿದೆ. ಇದನ್ನೂ ಓದಿ: ಗ್ಯಾರಂಟಿಗಳ ಅನುಷ್ಠಾನ ಉಪಕ್ರಮಕ್ಕೆ ವಿಶ್ವಸಂಸ್ಥೆ ಅಧ್ಯಕ್ಷ ಶ್ಲಾಘನೆ
ಈ ಬಾರಿ ದೆಹಲಿಯಲ್ಲಿ ಶೇ 60.54 ರಷ್ಟು ಮತದಾನವಾಗಿದ್ದು, ಇದು 2020 ಕ್ಕೆ ಹೋಲಿಸಿದರೆ ಶೇ 2.5 ರಷ್ಟು ಕಡಿಮೆಯಾಗಿದೆ. ಅದೇನೆ ಆಗಲಿ ದೆಹಲಿಯ ಅಧಿಕಾರದ ಗದ್ದುಗೆ ಏರುವವರು ಯಾರು? ಮತದಾನ ಬಾಂಧವರು ಯಾವ ಪ್ರಜೆಯನ್ನು ಅಧಿಕಾರದ ಗದ್ದುಗೆ ಏರುಸುತ್ತಾರೆ ಎಂಬುದೇ ಕುತೂಹಲದ ಸಂಗತಿಯಾಗಿದೆ.
