ಬೆಂಗಳೂರು: ಕಾಲಜ್ಞಾನಿ ಮಹಾಯೋಗಿ ಶ್ರೀ ವೇಮನ 613ನೇ ಜಯಂತಿಯನ್ನು ಎಚ್.ಎಸ್.ಆರ್. ಬಡಾವಣೆಯ ಶ್ರೀ ವೇಮನ ಮಹಾಯೋಗಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಚರಿಸಲಾಯಿತು.ಶ್ರೀ ಮಹಾ ಯೋಗಿ ವೇಮನ ಪುತ್ತಳಿಗೆ ಹಾರ ಹಾಕುವ ಮೂಲಕ ನಾಡಿನ ಸಮಸ್ತ ಜನತೆಗೆ ಶ್ರೀ ವೇಮನ ಜಯಂತಿಯ ಶುಭಾಶಯಗಳು ತಿಳಿಸಲಾಯಿತು.
ವೇಮನರ ತತ್ತ್ವ ಸಂದೇಶಗಳ ಜ್ಞಾನ ಮತ್ತು ಜಾಗೃತಿ ಜನರಲ್ಲಿ ಮೂಡಬೇಕು, ಶಾಂತಿ, ಸಮಾನತೆ, ಸೌಹಾರ್ದತೆಯ ಪರಿಮಳ ಜನಮನದಲ್ಲಿ ಪಸರಿಸುವಂತಾಗಬೇಕು ಎನ್ನುವ ಉದಾತ್ತ ಧೈಯದೊಂದಿಗೆ ವೇಮನರ ಜಯಂತಿಯನ್ನು ದೇಶದ ಎಲ್ಲೆಡೆ “ಜನವರಿ 19ರಂದು” ಆಚರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಹೆಚ್ ಎಸ್ ಆರ್ ಬಡಾವಣೆಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ವಾಸುದೇವ ರೆಡ್ಡಿ, ಅನಿಲ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
