ಶಹಾಪುರ: ಜಿಲ್ಲೆಯ ಕೀರ್ತಿ ಹೆಚ್ಚಿಸುವಲ್ಲಿ ನೌಕರರ ಪಾತ್ರ ಹೆಚ್ಚಿದ್ದು, ಆ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಮಾಣಿಕವಾಗಿ ಕೆಲಸ ಮಾಡಬೇಕು. ನಿಮ್ಮ ಸಹಕಾರ ಅಗತ್ಯ, ಸರ್ಕಾರದ ಗ್ಯಾರಂಟಿ ಯೋಜನೆಗಳು ಜನಸಾಮನ್ಯರಿಗೆ ತಲುಪಿಸುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.
ನಗರದ ಫಕೀರೇಶ್ವರ ಮಠದಲ್ಲಿ ಸರ್ಕಾರಿ ನೌಕರ ಸಂಘದ ಜಿಲ್ಲಾ ಘಟಕಕ್ಕೆ ಆಯ್ಕೆಯಾಗಿರುವ ರಾಯಪ್ಪಗೌಡ ಹುಡೇದ ಅವರಿಗೆ ಇಂ(ದು ಶನಿವಾರ ಜ. 18) ರಂದು ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ ಅವರು, ಈಗಿನ ಸಂದರ್ಭದಲ್ಲಿ ಅನೇಕ ತೊಂದರೆಗಳ ಮಧ್ಯೆ ನೌಕರರು ತಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದು ಇದರಿಂದ ಇಡೀ ದೇಶದಲ್ಲಿಯೇ ಕರ್ನಾಟಕ ರಾಜ್ಯ ಮಾದರಿಯ ರಾಜ್ಯವಾಗಲು ನೌಕರರ ಪಾತ್ರ ಬಹುಮುಖ್ಯವಾಗಿದೆ. ಪ್ರಾಮಾಣಿಕವಾಗಿ ತಾವು ಮಾಡುವ ಕೆಲಸದಲ್ಲಿ ನಿಷ್ಠೆಯಿಂದ ಉತ್ತಮ ನಡತೆಯಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಅರ್ಹರಿಗೆ ಕಲ್ಪಸಿ ಜನರ ನೀರಿಕ್ಷೆಗೆ ತಕ್ಕಂತೆ ಸಮರ್ಥವಾಗಿ ಕೆಲಸ ನಿರ್ವಹಿಸಿ ಎಂದು ತಿಳಿಸಿದರು.
ಉಪ ಖಜಾನೆ ಅಧಿಕಾರಿ ಡಾ.ಮೋನಪ್ಪ ಶಿರವಾಳ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸದಾ ಕೆಲಸದ ಒತ್ತಡದಲ್ಲಿ ಸೇವೆ ಸಲ್ಲಿಸುವಂತೆ ಆಗಿದೆ. ಸಂಘದ ಮೂಲಕ ಇನ್ನಷ್ಟು ಹೆಚ್ಚಿನ ಕೆಲಸವನ್ನು ನಾವೆÀಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ರಾಯಪ್ಪಗೌಡ ಹುಡೇದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ಮತ್ತು ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಅಲ್ಲದೇ ಜಿಲ್ಲೆಯ ಆರ್ಡಿಪಿಆರ್ ಇಲಾಖೆಯಿಂದ ಚುನಾಯಿತರಾದ ನೂತನ ನಿರ್ಧೇಶಕರು ಮತ್ತು ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಇದನ್ನೂ ಓದಿ: ಸಂವಿಧಾನ ನಮ್ಮೆಲ್ಲರ ಪಾಲಿನ ಪವಿತ್ರ ಗ್ರಂಥ: ಡಿಸಿಎಂ
ಫಿಕೀರೇಶ್ವರ ಮಠದ ಪೂಜ್ಯ ಗುರುಪಾದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಬೈ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ವಿಶ್ವನಾಥರೆಡ್ಡಿ ದರ್ಶನಾಪುರ, ತಹಸೀಲ್ದಾರ ಉಮಾಕಾಂತ ಹಳ್ಳೆ, ಸುರಪುರ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್, ಮಲ್ಲಿಕಾರ್ಜುನ ಸಂಗ್ವಾರ, ಜಿಲ್ಲಾ ಖಜನಾಧಿಕಾರಿ ಮಾಳಿಂಗರಾಯ, ನಿವೃತ್ತ ಡಿಡಿಪಿಐ ಶಾಂತಗೌಡ ಪಾಟೀಲ್, ಬಸವಂತರಾಯಗೌಡ, ಟಿಎಚ್ಓ ಡಾ.ರಮೇಶ ಗುತ್ತೆದಾರ, ಪಿಡಿಓ ಸಂಘದ ಜಿಲ್ಲಾಧ್ಯಕ್ಷ ಭಿಮನಗೌಡ ಬಿರೆದಾರ, ತಾಲೂಕ ಅಧ್ಯಕ್ಷ ದೇವರಾಜ ಗೋನಾಲ, ಶ್ರೀಶೈಲ ಹೊಸ್ಮನಿ, ಗೀತಾಂಜಲಿ ಮುಗುಳಿ, ಮರಿಲಿಂಗಪ್ಪ ಮಳ್ಳಳ್ಳಿ, ಸಿದ್ದನಗೌಡ ಗೂಗಲ್, ವೆಂಕಟೇಶ ರಾಠೋಡ, ಮುನೆಪ್ಪಗೌಡ ಪಾಟೀಲ, ಸಂಘದ ಕಾರ್ಯದರ್ಶಿ ಗೋವಿಂದ ರಾಠೋಡ, ಮರಿಲಿಂಗಪ್ಪ ಮಾಲಹಳ್ಳಿ, ಅಮರಪ್ಪ ಹೇರುಂಡಿ, ಶಾಯಿಬಾಬಾ ಅಣಬಿ, ಬನ್ನಪ್ಪ ನಾಯಕ, ಮಲ್ಲಣ್ಣ ದೇಸಾಯಿ, ಚೆನ್ನಪ್ಪಗೌಡ ಚೌದ್ರಿ, ಭೀಮಣಗೌಡ ತಳೆವಾಡ, ಚಂದಪ್ಪ, ಭೀಮನಗೌಡ ಬಿರಾದಾರ ಸೇರಿದಂತೆ ಇತರರು ಇದ್ದರು.
