ಮಂಡ್ಯ: ಶ್ರೀ ಡಾ.ಬಾಲಗಂಗಾಧರ ನಾಥ ಮಹಾಸ್ವಾಮೀಜಿಯವರ 80ನೇ ಜಯಂತೋತ್ಸವ ಹಾಗೂ12 ನೇ ವರ್ಷದ ಸಂಸ್ಮರಣಾ ಮಹೋತ್ಸವ ಹಾಗೂ ಸಂತಭಕ್ತ ಸಂಗಮ ಕಾರ್ಯಕ್ರಮವನ್ನು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ನವರು ಉದ್ಘಾಟಿಸಿದರು.
ಶ್ರೀ, ಬಾಲಗಂಗಾದರನಾಥ ಸ್ವಾಮೀಜಿಯವರಂತೆ ಅನ್ನದಾಸೋಹ, ವಿದ್ಯೆಯನ್ನು ಕಲ್ಪಿಸುತ್ತಿರುವ ಮಹತ್ತರ ಕೆಲಸಗಳನ್ನು ದೇಶದ ಎಲ್ಲಾ ಕಡೆಯಲ್ಲಿಯೂ ಮಾಡುತ್ತಿರುವ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಯವರ ಸೇವೆ ಅಪಾರವಾಗಿದೆ ಎಂದರು.
ಬೆಳಗಾವಿಯಲ್ಲಿ ಗಾಂಧೀ ಕಾರ್ಯಕ್ರಮದ ಬಹುದೊಡ್ಡ ಕೆಲಸ ನಮ್ಮ ನಾಯಕರು ನೀಡಿದ್ದಾರೆ ಅಲ್ಲಿ ಬರುವ ಎಲ್ಲಾ ಕಾರ್ಯಕರ್ತರಿಗೂ ಹಾಗೂ ಗಾಂಧೀ ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನು ಕಲ್ಲಿಸಬೇಕಾಗಿರುವುದರಿಂದ ಅಲ್ಲಿರಬೇಕಿತ್ತು ನಮ್ಮ ನಾಯಕರು ನೀಡಿರುವ ಜವಾಬ್ದಾರಿ ನಿರ್ವಹಿಸುತ್ತಾ ನಮ್ಮ ಗುರುಗಳಾದ ಬಾಲಗಂಗಾಧರ ನಾಥ ಸ್ವಾಮೀಜಿಯವರ ಜಯಂತೋತ್ಸವದಲ್ಲಿ ನಾನು ಭಾಗವಹಿಸಲು ಸಂತೋಷ ವಾಗುತ್ತಿದೆ ಎಂದರು. ಇದನ್ನೂ ಓದಿ: ಕೋಟೆ ಅಭಿವೃದ್ಧಿಗೆ100 ಕೋಟಿ ಬಿಡುಗಡೆ
ಶ್ರೀ ಮಠದಲ್ಲಿ ಸುಮಾರು ಒಂದು ಲಕ್ಷದ ಅರವತ್ತು 3 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ ಎಂದರೆ ಅವರ ಸೇವೆ ಎಷ್ಟರ ಮಟ್ಟಿಗೆ ಬೆಳವಣಿಗೆ ಯಾಗಿದೆ ಎಂಬುವುದನ್ನು ನಾವು ಕಾಣಬಹುದು ದೊಡ್ಡ ಗುರುಗಳ ಮಾರ್ಗದಲ್ಲಿಯೇ ನಾನು ಅವರ ಸೇವಕನಾಗಿ ಮಠಕ್ಕೆ ನನ್ನ ಸೇವೆ ಸಲ್ಲಿಸುತ್ತಿದ್ದೇನೆ ಎಂದರು. ಸಾಮನ್ಯ ಕುಟುಂಬದಿಂದ ಬಂದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಯವರನ್ನು ದೊಡ್ಡ ಗುರುಗಳು ಗುರುತಿಸಿ ಈ ಮಠಕ್ಕೆ ಮಠಾಧಿಪತಿಯನ್ನಾಗಿ ನೇಮಿಸಿದ್ದು ನನಗೆ ಬಹಳ ಸಂತೋಷ ತಂದಿದೆ.
ಇವರು ಮಠಗಳ ಅಭಿವೃದ್ಧಿ, ಇಂಜನಿಯರಿಂಗ್ ಹಾಗೂ ವೈದ್ಯಕೀಯ ಸೇವೆ ಸಲ್ಲಿಸುವ ಶಿಕ್ಷಣ ಸಂಸ್ಥೆಗಳು ನಿರ್ಮಾಣ ಬಹಳ ದೊಡ್ಡದು. ದೊಡ್ಡಗುರುಗಳು ಎಲ್ಲಿಯೂ ಹೋಗಿಲ್ಲಾ ನಿರ್ಮಲಾನಂದನಾಥ ಸ್ವಾಮೀಜಿ ಯವರಲ್ಲಿಯೇ ನೆಲೆಸಿದ್ದಾರೆ ಎಂದರು ನಾನೂ ಒಂದು ಶೋಷಿತ ಸಮುದಾಯದಿಂದ ಬಂದವನಾಗಿದ್ದು ನಮ್ಮ ಉಟ್ಟೂರು ಕಂಬದಹಳ್ಳಿಯಲ್ಲಿ ಮನೆ ನಿರ್ಮಾಣ ಮಾಡಿದಾಗ ಅದನ್ನು ಎಲ್ಲಾ ಗುರುಗಳನ್ನು ಸೇರಿಸಿ ಗೃಹಪ್ರವೇಶ ಮಾಡಿಸಿದ್ದು ಸ್ವಾಮೀಜಿ ಯವರು ಅದನ್ನು ನಾನು ಸ್ಮರಿಸಲೇಬೇಕು ಎಂದರು.
