ಮಾಗಡಿ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನವಾಗಿ ಪಟ್ಟಣದ ಹೊಸಪೇಟೆ ಸರ್ಕಲ್ ಬಳಿ ಇರುವ TAPCMS ನ ನಿವೇಶನದಲ್ಲಿ ಗೋಧಾಮು ನಿರ್ಮಾಣ ಕಾಮಗಾರಿಗೆ ಶಾಸಕ H C ಬಾಲಕೃಷ್ಣ ಶಂಕುಸ್ಥಾಪನೆ ನೆರೆವೇರಿಸಿದರು.
ಶಂಕುಸ್ಥಾಪನೆ ನೆರೆವೇರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸ್ಥಳ ಪಟ್ಟಣಕ್ಕೆ ಸಮೀಪವಿದ್ದು ಈ ಜಾಗದಲ್ಲಿ ಮಾಲ್ ನಿರ್ಮಿಸಬೇಕು ಗೋದಾಮು ನಿರ್ಮಿಸಲು ಬೇರೆ ಜಾಗವನ್ನು ನೀಡುತ್ತೇನೆ ಎಂದು ನನ್ನ ಅಭಿಪ್ರಾಯ ತಿಳಿಸಿದ್ದೇನೆ ಎಂದರು. ಇದನ್ನೂ ಓದಿ: ನಾನು ಮೇಲು ಜಾತಿ-ಕೆಳ ಜಾತಿ ಅಂತಲೇ ಬಳಸ್ತೀನಿ: ಸಿಎಂ
ಕೋಟೆ ಅಭಿವೃದ್ಧಿಗೆ100 ಕೋಟಿ ಬಿಡುಗಡೆಯಾಗಿದ್ದು ಟೆಂಡರ್ ಹಂತದಲ್ಲಿದೆ ಕೋಟೆ ಕಂದಕ ವಿಚಾರದಲ್ಲಿ ಸ್ವಲ್ಪ ಗೊಂದಲವಿದ್ದು ಅಧಿಕಾರಿಗಳೊಂದಿಗೆ ಮಾತನಾಡಿ ತೀರ್ಮಾನಿಸಲಾಗುವುದು ಮಾಗಡಿ ಅಭಿವೃದ್ಧಿ ಮಾಡುವ ಕೆಲಸ ಮಾಡುತ್ತಿದ್ದು ಕಂದಕ ಮುಚ್ಚುವುದು ನನ್ನ ಉದ್ದೇಶವಲ್ಲ ಕಂದಕ ಉಳಿಸಲು ಹೋದರೆ ಹೊಂಬಾಬಾಳಮ್ಮನಪೇಟೆ ಕೆರೆ ಮುಚ್ಚಬೇಕಾಗುತ್ತದೆ ಎಂದು ತಿಳಿಸಿದರು.
TAPCMS ಅಧ್ಯಕ್ಷರಾದ ಹೊನ್ನಾಪುರ ಶಿವಪ್ರಸಾದ್ ಮಾತನಾಡಿ, 3ಕೋಟಿ 70 ಲಕ್ಷದ ಗೋಧಾಮು ನಿರ್ಮಾಣದ ಕಾಮಗಾರಿಗೆ ಶಾಸಕ H C ಬಾಲಕೃಷ್ಣರು ಗುದ್ದಲಿ ಪೂಜೆ ನೆರವೇರಿಸಿದ್ದು, ಎಲ್ಲಾ ಆಡಳಿತ ಮಂಡಳಿಯವರ ಸಹಕಾರದೊಂದಿಗೆ 6 ತಿಂಗಳೊಳಗೆ, 120×150 ಅಡಿ ವಿಸ್ತೀರ್ಣದ ಜಾಗದಲ್ಲಿ ಪಡಿತರ ಸಂಗ್ರಹ ಹಾಗೂ ಕಸಬಾ ಮತ್ತು ಮಾಡಬಾಳ್ ರೈತರಿಗೆ ರಾಗಿ ಖರೀದಿ ಕೇಂದ್ರಕ್ಕೆ ಅನುಕೂಲವಾಗಲೆಂದು ಗೋದಾಮು ನಿರ್ಮಿಸಲಾಗುತಿದೆ ಹಾಗೂ ಈ ಜಾಗದಲ್ಲಿ ವೇ ಬ್ರಿಡ್ಜ್ ನಿರ್ಮಿಸುವ ಉದ್ದೇಶವಿದೆ ಎಂದು ತಿಳಿಸಿದರು.
