Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • 3 ದಿನ ತಿಂಥಣಿ ಜಾತ್ರೆ ಮಹೋತ್ಸವ
  • State

3 ದಿನ ತಿಂಥಣಿ ಜಾತ್ರೆ ಮಹೋತ್ಸವ

admin January 10, 2025 1 minute read
Spread the love

ಶಹಾಪುರ: ಪ್ರತಿ ವರ್ಷದಂತೆ ಈ ಬಾರಿಯೂ ರಾಯಚೂರಿನ ದೇವದುರ್ಗ ತಾಲೂಕಿನ ತಿಂಥಣಿ ಕಾಗಿನೆಲೆ ಮಹಾಸಂಸ್ಥಾನ ಗುರುಪೀಠದ ಆವರಣದಲ್ಲಿ ಜ.12,13 ಮತ್ತು 14ರಂದು ಮೂರು ದಿನಗಳ ಕಾಲ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ನಡೆಯಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಆದ್ದರಿಂದ ತಾಲೂಕಿನಿಂದ ಎಲ್ಲಾ ಸಮಾಜದ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕುರುಬ ಸಮಾಜದ ಮುಖಂಡ ಡಾ.ಭೀಮಣ್ಣ ಮೇಟಿ ಮನವಿ ಮಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕುರುಬ ಸಮಾಜದ ಮುಖಂಡರು ಇಂದು (ಶುಕ್ರವಾರ ಜ. 10) ರಂದು ಪತ್ರಿಕಾಗೋಷ್ಠಿ ನಡೆಸಿ ಬಳಿಕ ಕರಪತ್ರ ಬಿಡುಗೊಡೆಗೊಳಿಸಿ ಮಾತನಾಡಿದ ಅವರು, ಪೂಜಾರಿಗಳ ಸಮಾವೇಶ, ಶಿವಸಿದ್ಧ ಯೋಗ ವಿದ್ಯಾಮಂದಿರ ಶಿಲಾನ್ಯಾಸ ಜರುಗುವುದು. ಪರಮಪೂಜ್ಯ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸುವರು. ಪೂಜ್ಯ ಶ್ರೀ ಸಿದ್ದರಾಮನಂದ ಮಹಾಸ್ವಾಮಿಗಳು ನೇತೃತ್ವ ವಹಿಸುತ್ತಾರೆ. ಇದನ್ನೂ ಓದಿ: ಕೋರಮಂಗಲದಲ್ಲಿ ಕಂಗೊಳಿಸುತ್ತಿರುವ ವೆಂಕಟೇಶ್ವರ

ಜ.12 ರಂದು ಪವಿತ್ರ ಪ್ರಾಣಿ ಕುರಿ, ಪಂಚರತ್ನಗಳಾದ ಕಂಬಳಿ, ಭಂಡಾರ, ಡೊಳ್ಳು, ಪಲ್ಲಕ್ಕಿ, ಬೆತ್ತ ಪೂಜೆ ಮತ್ತು ಹಾಲುಮತ ಧರ್ಮದ ಧ್ವಜಾರೋಹಣದೊಂದಿಗೆ ಹಾಲುಮತ ಸಂಸ್ಕೃತಿ ವೈಭವ ಆರಂಭವಾಗಲಿದೆ. ಕೃಷ್ಣ ನದಿಯಲ್ಲಿ ಗಂಗೆ ಪೂಜೆ, ಕುಂಭ-ಕಳಸ, ಡೊಳ್ಳು ವಾದ್ಯಗಳೊಂದಿಗೆ ಬೀರದೇವರ ಪಲ್ಲಕ್ಕಿ ಮೆರವಣಿಗೆ, ಶಿವಸಿದ್ಧಯೋಗ ವಿದ್ಯಾಮಂದಿರ ಶಿಲಾನ್ಯಾಸ ಮತ್ತು ಪೂಜಾರಿಗಳ ಸಮಾವೇಶ, ಟಗರುಗಳ ಕಾಳಗ ನಡೆಯಲಿದೆ.

ಜ.13 ರಂದು ಹಾಲುಮತ ಭಾಸ್ಕರ, ಕನಕ ರತ್ನ ಸಿದ್ಧಶ್ರೀ ಪ್ರಶಸ್ತಿ ಪ್ರಧಾನ ಮತ್ತು ಸನ್ಮಾನ ಸಮಾರಂಭ ಜರುಗಲಿದೆ. ರಾಜ್ಯಪಾಲ ಸಿ.ಎಚ್ ವಿಜಯಶಂಕರ ಆಗಮಿಸಲಿದ್ದಾರೆ.

ಜ.14 ರಂದು ಸಿದ್ದರಾಮೇಶ್ವರ ಜಯಂತಿ ಪ್ರಯುಕ್ತ ಸರ್ವ ಸಿದ್ಧರ ಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ. ಸಂಜೆ ಎತ್ತುಗಳಿಂದ ಭಾರ ಎಳೆಯುವ ಸ್ಪರ್ಧೆ ನಡೆಯಲಿದೆ.

ಕುರುಬ ಸಮುದಾಯದ ಸಂಸ್ಕೃತಿ, ಸಾಮಾಜಿಕ, ರಾಜಕೀಯ ಇತಿಹಾಸ ಕುರಿತು ರಾಜ್ಯದ ಹಲವು ವಿದ್ವಾಂಸರಿAದ ಮೂರು ದಿನಗಳ ಕಾಲ ಹಾಲುಮತ ಸಂಸ್ಕೃತಿ ಕಮ್ಮಟ ನಡೆಯಲಿದೆ. ಪಾರಂಪರಿಕ ಸಿದ್ಧ ವೈದ್ಯರಿಂದ ಉಚಿತ ಆರೋಗ್ಯ ಸ್ಪಂದನಾ ಶಿಬಿರ ನಡೆಯಲಿದೆ.

ಸಚಿವರಾದ ಎಸ್.ಭೈರತಿ ಸುರೇಶ, ಸತೀಶ ಜಾರಕಿಹೊಳಿ, ಡಾ.ಶರಣು ಪ್ರಕಾಶ ಪಾಟೀಲ್, ಎನ್.ಎಸ್ ಬೋಸರಾಜು, ಸಚಿವ ಪ್ರಿಯಾಂಕ ಖರ್ಗೆ, ಶಿವರಾಜ ತಂಗಡಗಿ, ಶರಣಬಸಪ್ಪಗೌಡ ದರ್ಶನಾಪುರ ಭಾಗವಹಿಸುವರು.

ಆದ್ದರಿಂದ ಎಲ್ಲಾ ಕುಲಭಾಂಧವರು, ಹಾಲುಮತ ಸಮಾಜದ ನೌಕರರು, ರಾಜಕೀಯ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಕನಕ ನೌಕರರ ಸಂಘದ ಅಧ್ಯಕ್ಷ ಧರ್ಮಣ್ಣಗೌಡ ಪಾಟೀಲ್, ಅಯ್ಯಣ ಇನಾಂದಾರ, ಮಲ್ಲಿಕಾರ್ಜುನ ಕಂದಕೂರ, ಶಾಂತಗೌಡ ನಾಗನಟಿಗಿ, ಸಂಗೂಳ್ಳಿ ರಾಯಣ್ಣ ಯುವಕ ಸಂಘದ ತಾಲೂಕ ಅಧ್ಯಕ್ಷ ರಾಯಪ್ಪ ಚಲುವಾದಿ, ಅಶೋಕ ದಿನ್ನಿ, ಭೀಮಾಶಂಕರ ಹುಲ್ಕಲ್, ಮಹೇಶ ರಸ್ತಾಪುರ, ಶ್ರೀನಿವಾಸ ನಾಶಿ, ಮಾಳಪ್ಪ ಹಳಿಸಗರ, ಬಸವರಾಜ ಹಳಿಸಗರ, ಬಲಭೀಮ ಮಡ್ನಾಳ, ಭೀಮಣಗೌಡ ದರಿಯಾಪುರ, ತಿರುಪತಿ ಬಾಣತಿಹಾಳ, ಶರಣು ಮೇಟಿ ಸೇರಿದಂತೆ ಇತರರು ಇದ್ದರು.

About the Author

admin

Administrator

Visit Website View All Posts

Spread the love

Post navigation

Previous: ಕೋರಮಂಗಲದಲ್ಲಿ ಕಂಗೊಳಿಸುತ್ತಿರುವ ವೆಂಕಟೇಶ್ವರ
Next: ಮುಡಾ ಕುರಿತಾಗಿ ಪ್ರತ್ಯೇಕ ಸಭೆ ಕರೆಯಲು ಸಿಎಂ ಸೂಚನೆ

Views:

25

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.