ಬೆಂಗಳೂರು: ಇಂದು ಎಲ್ಲೆಡೆ ವೈಕುಂಠ ಏಕಾದಶಿಯನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಅದರಂತೆ ಕೋರಮಂಗಲದಲ್ಲಿರುವಂತಹ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ರೀತಿಯ ಪುಷ್ಪಾಲಂಕಾರ ಮಾಡಿ ದೇವರಿಗೆ ಮಂಗಳಾರತಿಯ ಜೊತೆಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವೆಂಕಟೇಶ್ವರ ದೇವರ ಆಶೀರ್ವಾದ ಪಡೆಯಲೆಂದು ಸಾವಿರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವರ ಆಶೀರ್ವಾದ ಪಡೆದರು. ಇದನ್ನೂ ಓದಿ: ಅಗರದಲ್ಲಿ ಅದ್ದೂರಿ ವೈಕುಂಠ ಏಕದಶಿ ಆಚರಣೆ
ಬಂದಿರುವಂತಹ ಸಾವಿರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಹಾಗೂ ಪ್ರಸಾದ ರೂಪದಲ್ಲಿ ಲಡ್ಡುವನ್ನು ಹಂಚಲಾಯಿತು.
