ಹೋಮ್ ಕ್ವಾರಂಟೈನ್ ಗೆ ಐವರು ಮಾಧ್ಯಮ ಪ್ರತಿನಿಧಿಗಳು

ಹೋಮ್ ಕ್ವಾರಂಟೈನ್ ಗೆ ಐವರು ಮಾಧ್ಯಮ ಪ್ರತಿನಿಧಿಗಳು

ಹುಬ್ಬಳ್ಳಿ: ನಗರದ ವಿವಿಧ ಮಾಧ್ಯಮ ಸಂಸ್ಥೆಗಳಿಗೆ ಸೇರಿದ  ಐವರು ಮಾಧ್ಯಮ ಪ್ರತಿನಿಧಿಗಳು ಕೊರೊನಾದ ಯಾವುದೇ ಲಕ್ಷಣಗಳಿಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ಸ್ವಯಂ ಪ್ರೇರಣೆಯಿಂದ ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

ಏ.9 ರಂದು ಶಬ್ ಎ ಬರಾತ್ ಆಚರಣೆಯ ಕುರಿತು ವರದಿಗಾಗಿ ಅವರು ಹುಬ್ಬಳ್ಳಿಯ ತೊರವಿಹಕ್ಕಲದ ಖಬರಸ್ತಾನಕ್ಕೆ ತೆರಳಿದ್ದರು.

ಸ್ಮಶಾನದ ಕಾವಲುಗಾರನಿಗೆ ( ಪಿ- 363) ಕೋವಿಡ್  ಸೋಂಕು ಇರುವುದು ಏ.18 ರಂದು ದೃಢಪಟ್ಟ ಹಿನ್ನೆಲೆಯಲ್ಲಿ ಈ ಎಲ್ಲಾ ಐವರು ಪ್ರತಿನಿಧಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಹೋಮ್ ಕ್ವಾರಂಟೈನ್ ಗೆ ಒಳಪಟ್ಟಿದ್ದಾರೆ. ಈ ಐದೂ  ಜನ ಮಾಧ್ಯಮ ಪ್ರತಿನಿಧಿಗಳ  ಆರೋಗ್ಯ ಸ್ಥಿರವಾಗಿದೆ.

 

Related