ಯುವತಿ ಮೇಲೆ ಫೈರಿಂಗ್

ಯುವತಿ ಮೇಲೆ ಫೈರಿಂಗ್

ಬೆಂಗಳೂರು. ಮಾ. 1: ಮಾರತ್ತಹಳ್ಳಿಯಲ್ಲಿ ಯುವತಿ ಮೇಲೆ ಫೈರಿಂಗ್ ಮಾಡಿದ್ದ ಪಾಗಲ್ ಪ್ರೇಮಿ ಅಮರೇಂದ್ರ ಪಟ್ನಾಯಕ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಫೆ. 25 ರಂದು ಯುವತಿ ಶುಭಾಶ್ರೀ ವಾಸವಿದ್ದ ಪಿಜಿ ಬಳಿ ಹೋಗಿದ್ದ ಅಮರೇಂದ್ರ ಪಟ್ನಾಯಕ್, ಶುಭಾಶ್ರೀ ಮೇಲೆ ಪಿಸ್ತೂಲ್ ಬಳಸಿ ಫೈರಿಂಗ್ ಮಾಡಿದ್ದನು. ಯುವತಿಯ ಹೊಟ್ಟೆ ಭಾಗಕ್ಕೆ ಫೈರ್ ಮಾಡಿದ ಆರೋಪಿ ತಾನು ಕೂಡ ಕೈ ಮತ್ತು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಇಬ್ಬರ ಪರಿಸ್ಥಿತಿ ಕೂಡ ಗಂಭೀರವಾಗಿದ್ದು, ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.
ಸದ್ಯ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಪೊಲೀಸರು ಶುಭಾಶ್ರೀ ಹೇಳಿಕೆ ಪಡೆದಿದ್ದಾರೆ.

Related