ಯುವ ಕ್ರಿಕೆಟನಿಗೆ ಜೈಲು ಶಿಕ್ಷೆ; ಕಾರಣ ಏನು ಗೊತ್ತಾ?

ಯುವ ಕ್ರಿಕೆಟನಿಗೆ ಜೈಲು ಶಿಕ್ಷೆ; ಕಾರಣ ಏನು ಗೊತ್ತಾ?

ನೇಪಾಳ: ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಬಲಕಿಯರ ಮೇಲೆ ಅತ್ಯಾಚಾರಣ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಖ್ಯಾತ ಕ್ರಿಕೆಟ್ ಈಗ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಿಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಕ್ರಿಕೆಟಿಗ ಸಂದೀಪ್ ಲಮಿಚಾನೆಗೆ ಜೈಲು ಶಿಕ್ಷೆ ನೀಡಲಾಗಿದೆ ಎಂದು ಶುಕ್ರವಾರ ತಿಳಿದು ಬಂದಿದೆ.

ಹೌದು ನೇಪಾಳದ ಯುವ ಕ್ರಿಕೆಟಿಗ ಸಂದೀಪ್ ಲಮಿಚಾನೆಗೆ ಅಪ್ರಾಪ್ತಿಯ ಮೇಲೆ ಅತ್ಯಾಚಾರ ಎಸಿಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇವರಿಗೆ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ನೇಪಾಳ ಕ್ರಿಕೆಟ್ ತಂಡಕ್ಕೆ ಭಾರೀ ದೊಡ್ಡ ಹಿನ್ನಡೆ ಆಗಿದೆ. ತಂಡದ ಮಾಜಿ ನಾಯಕ ಮತ್ತು ಅದ್ಭುತ ಲೆಗ್ ಸ್ಪಿನ್ನರ್ ಸಂದೀಪ್ ಲಮಿಚಾನೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ (ಡಿ.29) ವಿಚಾರಣೆ ನಡೆದಿದ್ದು, ಕಠ್ಮಂಡು ಜಿಲ್ಲಾ  ನ್ಯಾಯಾಲಯ ಸಂದೀಪ್ ಲಮಿಚಾನೆ ದೋಷಿ ಎಂದು ತೀರ್ಪು ನೀಡಿದೆ. ಆದರೆ, ಈ ಪ್ರಕರಣದಲ್ಲಿ ಸಂದೀಪ್‌ಗೆ ಎಷ್ಟು ವರ್ಷ ಶಿಕ್ಷೆ ವಿಧಿಸಲಾಗುತ್ತದೆ ಎಂಬುದನ್ನು ನ್ಯಾಯಾಧೀಶರು ಬಹಿರಂಗಪಡಿಸಿಲ್ಲ. ಮುಂದಿನ ವಿಚಾರಣೆಯಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ.

ಸಂದೀಪ್ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಡಿದ್ದರು. ಈ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಪ್ರತಿನಿಧಿಸುತ್ತಿದ್ದಾರೆ. ಲಾಮಿಚಾನೆ ಜನವರಿ 12 ರಿಂದ ಜಾಮೀನಿನ ಮೇಲೆ ಹೊರಗಿದ್ದಾರೆ. ನೇಪಾಳ ಪೊಲೀಸರು ಅವರನ್ನು ಅಕ್ಟೋಬರ್ 6 ರಂದು ಬಂಧಿಸಿದ್ದರು.

Related