ನಮ್ಮ ಆರೋಗ್ಯ ಸಂರಕ್ಷಣೆಗೆ ಯೋಗ ಸಹಕಾರಿ ಡಾ. ಎಚ್ ಸಿ ಮಾದೇವಪ್ಪ

ನಮ್ಮ ಆರೋಗ್ಯ ಸಂರಕ್ಷಣೆಗೆ ಯೋಗ ಸಹಕಾರಿ ಡಾ. ಎಚ್ ಸಿ ಮಾದೇವಪ್ಪ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಸಹ ವಿವಿಧ ರೀತಿಯ ಕ್ರೀಡೆಗಳನ್ನು ಆಯೋಜಿಸಲಾಗಿತದ್ದು ಇದರ ಜೊತೆ ಯೋಗಭ್ಯಾಸಕ್ಕೂ ಕೂಡ ಇಂದು ಸಚಿವರಾದಂತಹ ಡಾ. ಎಚ್ ಸಿ ಮಾದೇವಪ್ಪ ಅವರು ಚಾಲನೆ ನೀಡಿದ್ದಾರೆ.

ಇನ್ನು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಸಚಿವರು, ಪುರಾತನ ಯೋಗ ಮತ್ತು ನ್ಯಾಚರೋಪತಿ ಆರೋಗ್ಯವನ್ನು ಸಂರಕ್ಷಣೆ ಮಾಡುವಂತಹ ಅಸ್ತ್ರಗಳು, ಹೆಚ್ಚು ಹಣ ಖರ್ಚು ಮಾಡದೆ ರೋಗವನ್ನು ನಿಯಂತ್ರಣ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ತಿಳಿಸಿದರು.

ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಅರಮನೆ ಮುಂಭಾಗದ ಆವರಣದಲ್ಲಿ ಬುಧವಾರ ಯೋಗ ದಸರಾ ಉಪಸಮಿತಿ ಆಯೋಜಿಸಿದ್ದ ಯೋಗಾಭ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ದಸರಾ ಉತ್ಸವದಲ್ಲಿ ಯೋಗಭ್ಯಾಸವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮೈಸೂರು ಸಂಸ್ಕೃತಿಕ ನಗರಿ ಮಾತ್ರವಲ್ಲದೆ, ಯೋಗದ ನಗರ ಎಂದೂ ಪ್ರಸಿದ್ಧಿ ಪಡೆದಿದೆ. ರಾಜರ ಕಾಲದಿಂದಲೂ ಕೂಡ ಯೋಗವನ್ನು ಪ್ರೋತ್ಸಾಹಿಸಲಾಗುತ್ತಿದೆ. ದೇಶಕ್ಕೆ ಮಾದರಿ ಆಡಳಿತ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ ದೂರದೃಷ್ಟ ಕೋನವನ್ನು ಆಧರಿಸಿ ಈ ಬಾರಿ ದಸರಾ ವನ್ನು ಅತ್ಯುತ್ತಮವಾಗಿ ಆಯೋಜನೆ ಮಾಡಲಾಗಿದೆ ಎಂದರು.

ಹಣ ಆಸ್ತಿ ಸಂಪತ್ ಸಂಪತ್ತು ಕಳೆದುಕೊಂಡರೆ ಮರಳಿ ಪಡೆದುಕೊಳ್ಳಬಹುದು ಆದರೆ, ಆರೋಗ್ಯ ಕೆಟ್ಟರೆ ಅದು ತುಂಬಲಾರದ ನಷ್ಟ. ಪ್ರತಿನಿತ್ಯ ನಿಯಮಿತವಾಗಿ ವ್ಯಾಯಾಮ, ನಡಿಗೆ ಕ್ರೀಡಾಭ್ಯಾಸ ಜೊತೆಗೆ ಮನಸ್ಸನ್ನು ಉಲ್ಲಾಸದತ್ತ ಕೊಂಡೊಯ್ಯುವ ಯೋಗಾಭ್ಯಾಸವೂ ಕೂಡ ಆರೋಗ್ಯಕ್ಕೆ ಉತ್ತಮವಾದ ಚಿಕಿತ್ಸಾ ವಿಧಾನವಾಗಿದೆ ಎಂದು ಅಭಿಪ್ರಾಯ ತಿಳಿಸಿದರು.

ನಮ್ಮ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಯೋಗ ಉಪಯುಕ್ತವಾಗಿದೆ. ಆರೋಗ್ಯದಲ್ಲಿ ಸಮಾನತೆ ಕಾಯಲು ನಿರಂತರ ಯೋಗಾಭ್ಯಾಸ ಸಹಕಾರಿಯಾಗಿದೆ. ವಿಶ್ವದ ಎಲ್ಲ ಜನರು ಒಂದೇ ಕುಟುಂಬದವರು ಎಂಬ ಸಂದೇಶವನ್ನು ಯೋಗ ನೀಡುತ್ತದೆ ಎಂದು ಹೇಳಿದರು

ಆರೋಗ್ಯ ಇಲಾಖೆ ಸಚಿವನಾಗಿ ಕಾಲದಿಂದಲೂ ಯೋಗ್ಯ ಅಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದೇನೆ. 2017ರಲ್ಲಿ 50 ಸಾವಿರಕ್ಕೂ ಹೆಚ್ಚು ಯೋಗಪಟಗಳೊಂದಿಗೆ ಅಂತಾರಾಷ್ಟ್ರೀಯ ಯೋಗವನ್ನು ರೇಸ್ ಕೋರ್ಸ್ ನಲ್ಲಿ ಆಚರಿಸಿ ಗಿನಿಸ್ ದಾಖಲೆ ಮಾಡಲಾಗಿದೆ ಎಂದು ಮೆಲುಕು ಹಾಕಿದರು.

ಈ ವೇಳೆ ಯೋಗ ಗುರು ಶರತ್ ಜೋಯಿಸ್ ಮತ್ತು ಅವರ ವಿದೇಶಿಯ ಶಿಷ್ಯ ಬೃಂದದವರ ಅಷ್ಟಾಂಗ ಯೋಗಭ್ಯಾಸ ಮಾಡಿದರು.

ಈ ಕಾರ್ಯಕ್ರಮದಲ್ಲಿ ಮೇಯರ್ ಶಿವಕುಮಾರ್, ಉಪ ಮೇಯರ್ ಡಾ. ಜಿ ರೂಪ, ಯೋಗ ದಸರ ಉಪ ಸಮಿತಿ ಅಧ್ಯಕ್ಷ ದೇವರಾಜು, ಉಪಾಧ್ಯಕ್ಷರಾದ ಹೇಮಂತ್, ಮಹೇಶ್, ಉಪ ವಿಶೇಷಾಧಿಕಾರಿ ಕೆ ರಮ್ಯಾ, ಕಾರ್ಯಾದ್ಯಕ್ಷರಾದ ಡಿ. ಎಂ ರಾಣಿ, ಕಾರ್ಯದರ್ಶಿ ಡಾ. ಪುಷ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related