ಪ್ರಜ್ವಲ್ ವಿರುದ್ಧ ಮೋದಿ ಯಾಕೆ ಧ್ವನಿ ಎತ್ತುತ್ತಿಲ್ಲ..?: ಪ್ರಿಯಾಂಕಾ

ಪ್ರಜ್ವಲ್ ವಿರುದ್ಧ ಮೋದಿ ಯಾಕೆ ಧ್ವನಿ ಎತ್ತುತ್ತಿಲ್ಲ..?: ಪ್ರಿಯಾಂಕಾ

ನವದೆಹಲಿ: ಜೆಡಿಎಸ್ ನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ ಕೇವಲ ರಾಜ್ಯ ಮಾತ್ರವಲ್ಲದೇ ಇಡೀ ದೇಶದಾದ್ಯಂತ ಸುದ್ದಿ ಆಗುತ್ತಿದ್ದು, ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸಾವಿರಾರು ಹೆಣ್ಣು ಮಕ್ಕಳ ಬಾಳಲ್ಲಿ ಆಟವಾಡಿದ ಪ್ರಜ್ವಲ್ ರವರನ್ನು ನೀವು ಹೇಗೆ ಇನ್ನು ಬಿಟ್ಟಿದ್ದೀರಾ ಕಾನೂನು ಬದ್ಧವಾಗಿ ಕಠಿಣ ಕ್ರಮ ಕವಿಗೊಳ್ಳಬೇಕೆ ಹೊರತಾಗಿ ಆರೋಪಿಗಳ ಪರವಾಗಿಲ್ಲ ನಿಲ್ಲಬಾರದೆಂದು ಪ್ರಿಯಾಂಕ ಗಾಂಧಿಯವರು ನರೇಂದ್ರ ಮೋದಿಯವರ ವಿರುದ್ಧ ತಮ್ಮ ಆಕ್ರೋಶ ಅವರ ಹಾಕಿದ್ದಾರೆ.

ಈಗಾಗಲೇ ಸಾವಿರಾರು ಹೆಣ್ಣುಮಕ್ಕಳ ಬಾಳಲ್ಲಿ ಚೆಲ್ಲಾಟವಾಡಿದ ಪ್ರಜ್ವಲ್ ರೇವಣನಂತ ಹುಳಗಳು ಭೂಮಿ ಮೇಲೆ ಇರುವುದೇ ಭಾರವೆಂದು ಪ್ರಜ್ವಲ್ ವಿರುದ್ಧ ಆಕ್ರೋಶ ಅವರ ಹಾಕಿದ್ದಾರೆ. ಪ್ರಜ್ವಲ್ ರೇವಣ್ಣ ಜೊತೆ ಮೋದಿ ಫೋಟೋಗೆ ಪೋಸ್ ಕೊಟ್ಟ ಘಟನೆಯನ್ನು ಉಲ್ಲೇಖಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೂರಾರು ಮಹಿಳೆಯರ ಜೀವನವನ್ನು ಹಾಳು ಮಾಡಿದ್ದಾರೆ. ಆದರೂ ಮೋದಿ ಸುಮ್ಮನಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ತಮ್ಮ ಎಕ್ಸ್ ಖಾತೆಯ ಪೋಸ್ಟ್​ವೊಂದರಲ್ಲಿ ಹೇಳಿದ್ದಾರೆ.

ಪ್ರಧಾನಿಗಳು ಈ ನಾಯಕನ ಭುಜದ ಮೇಲೆ ಕೈ ಹಾಕಿ ಫೋಟೋಗೆ ಪೋಸ್ಟ್ ಕೊಟ್ಟಿದ್ದರು. ಚುನಾವಣೆಗೆ 10 ದಿನದ ಹಿಂದೆ ಈ ನಾಯಕನ ಪರವಾಗಿ ಪ್ರಧಾನಿ ಪ್ರಚಾರಕ್ಕೆ ಹೋಗುತ್ತಾರೆ. ವೇದಿಕೆಯಲ್ಲಿ ಹಾಡಿ ಹೊಗಳುತ್ತಾರೆ. ಇವತ್ತು ಕರ್ನಾಟಕದ ಆ ನಾಯಕ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಆ ವ್ಯಕ್ತಿಯ ಘೋರ ಅಪರಾಧಗಳ ಬಗ್ಗೆ ಕೇಳಿದರೇ ಸಾಕು ಹೃದಯ ನಡುಗುತ್ತದೆ. ಆ ವ್ಯಕ್ತಿ ನೂರಾರು ಮಹಿಳೆಯರ ಜೀವನ ಹಾಳು ಮಾಡಿದ್ದಾನೆ. ಆದರೂ ಮೋದಿ ಅವರೆ ನೀವಿನ್ನೂ ಮೌನವಾಗಿಯೇ ಇರುತ್ತೀರಾ?’ ಎಂದು ಎಐಸಿಸಿಯ ಪ್ರಧಾನ ಕಾರ್ಯದರ್ಶಿಯಾದ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

Related