ಬೆಳ್ಳಂಬೆಳಿಗ್ಗೆ ಪಿ.ಸಿ ಮೋಹನ್ ಗೆ ಮಂಗಳಾರತಿ ಎತ್ತಿದ ಮಹಿಳೆ

ಬೆಳ್ಳಂಬೆಳಿಗ್ಗೆ ಪಿ.ಸಿ ಮೋಹನ್ ಗೆ ಮಂಗಳಾರತಿ ಎತ್ತಿದ ಮಹಿಳೆ

ಬೆಂಗಳೂರು: ಬೆಳ್ಳಂಬೆಳಿಗ್ಗೆ ಪಿ.ಸಿ ಮೋಹನ್ ಗೆ ಮಂಗಳಾರತಿ ಎತ್ತಿದ ಮಹಿಳೆ.  ಪ್ರಶ್ನೆಗೆ ಉತ್ತರಿಸಲಾಗದೆ, ಕೋಪ, ಅಸೂಯೆ ಇವುಗಳನೆಲ್ಲ ತಮ್ಮ ಮುಖದಲ್ಲಿ ತುಂಬಿಕೊಂಡು ಓಡಿ ಹೋಗುತ್ತಿರುವ ಬಿಜೆಪಿಯ ಬೆಂಗಳೂರು ಸೆಂಟ್ರಲ್ ಲೋಕಸಭೆಯಿಂದ 3 ಭಾರಿ ಆಯ್ಕೆಯಾದ ಈ ಮಹಾಶಯ ಪ್ರಶ್ನೆ ಕೇಳಿದಕ್ಕೆ ಈ ರೀತಿ ಓಡುತ್ತಿದ್ದಾರೆ ಎಂದರೆ, ಈ ಭಾರಿ ಚುನಾವಣೆಯಲ್ಲಿ ಸೋತು ಮನೆಗೆ ಓಡೋದಂತು ಗ್ಯಾರೆಂಟಿಯೇ ಸರಿ.

ಹೌದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಸೆಂಟ್ರಲ್ ಬಿಜೆಪಿ ಅಭ್ಯರ್ಥಿಯಾಗಿರುವ ಪಿ ಸಿ ಮೋಹನ್ ಅವರು ಇಂದು ಬೆಳ್ಳಂಬೆಳ್ಳಗೆ ಹಲಸೂರು ಕೆರೆ ಸುತ್ತಮುತ್ತ ಮತ ಪ್ರಚಾರವನ್ನು ಕೈಗೊಂಡಿದ್ದಾರೆ.

ಇನ್ನು ಮತ ಪ್ರಚಾರ ಸಂದರ್ಭದಲ್ಲಿ  ಹಲಸೂರು ಲೇಕ್ ಸುತ್ತಮುತ್ತ ವಾಕಿಂಗ್ ಮಾಡುತ್ತಿರುವ ಮತದಾರರಲ್ಲಿ ಮತ ಪ್ರಚಾರ ಮಾಡುತ್ತಿರುವ ಸಂದರ್ಭದಲ್ಲಿ ಪಿಸಿ ಮೋಹನ್ ಅವರಿಗೆ ಮಹಿಳೆಯೊಬ್ಬರು ಪ್ರಶ್ನೆ ಕೇಳಿದ್ದಾರೆ. ಪ್ರಶ್ನೆ ಕೇಳಿದ್ದಕ್ಕೆ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಅವರು ಗರಂ ಆಗಿ ಮಹಿಳೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಮಹಿಳೆಯೊಬ್ಬರು ಪಿ ಸಿ ಮೋಹನ್ ಅವರು ನೀಡಿದ ಪಾಂಪ್ಲೆಟ್ ಹಿಡಿದು ಪಿ ಸಿ ಮೋಹನ್ ಎಂದರೆ ಜನ ಯಾರು ಎಂದು ಕೇಳುತ್ತಿದ್ದಾರೆ. ಈಗಾಗಲೇ ಪಿಸಿ ಮೋಹನ್ ಅವರು ಮೂರು ಬಾರಿ ಆಯ್ಕೆಯಾಗಿ ಬಂದಿದ್ದರು ಕೂಡ ಹಲಸೂರು ಸುತ್ತಮುತ್ತ ಮತ್ತು ಶಿವಾಜಿನಗರದ ಸುತ್ತಮುತ್ತ ಏನು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ ಎಂಬ ಪ್ರಶ್ನೆಗೆ ಪಿ ಸಿ ಮೋಹನ್ ಅವರು ಗರಂ ಆಗಿ ಪ್ರಚಾರ ಮಾಡುತ್ತಿರುವ ಸ್ಥಳದಿಂದ ಓಡಿ ಹೋಗಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಹಲಸೂರು ಮತ್ತು ಶಿವಾಜಿನಗರ ಜನಕ್ಕೆ ನೀವೇನು ಕೆಲಸ ಮಾಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಕ್ಕಾಗದೆ ಪಿ ಸಿ ಮೋಹನ್ ಅವರು ತಬ್ಬಿಬಾಗಿದ್ದಾರೆ.

ದಯವಿಟ್ಟು ಇಂಥ ಅಭ್ಯರ್ಥಿಗಳಿಗೆ ಮತ ನೀಡಬೇಡಿ, ಇಂಥ ಅಭ್ಯರ್ಥಿಗಳು ನಮಗೆ ಬೇಕಾ? ಹಾಗಾಗಿ ಸಮಾಜಕ್ಕೆ ಉತ್ತಮ ಕೆಲಸ ಮಾಡುವಂತಹ ನಾಯಕರನ್ನು ಆಯ್ಕೆ ಮಾಡಬೇಕು. ಎಚ್ಚರಿಕೆಯಿಂದ ಮತ ನೀಡಿ ಅಧಿಕಾರಕ್ಕೆ ತರಬೇಕೆಂದು ಮಹಿಳೆ ಹೇಳಿದ್ದಾರೆ.

Related