ಸಂವಿಧಾನವಿಲ್ಲದಿದ್ದರೆ ಮನುಷ್ಯರಂತೆ ಬದುಕಲಾಗುತ್ತಿರಲಿಲ್ಲ

ಸಂವಿಧಾನವಿಲ್ಲದಿದ್ದರೆ ಮನುಷ್ಯರಂತೆ ಬದುಕಲಾಗುತ್ತಿರಲಿಲ್ಲ

ದೇವರಹಿಪ್ಪರಗಿ : ವಿಧಾನಸಭಾ ಕ್ಷೇತ್ರದ ಯಲಗೊಡ ಗ್ರಾಮದಲ್ಲಿ ಕನ್ನಡ ಅಭಿಮಾನಿಗಳ ಬಳಗದಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮವನ್ನು ಜೆಡಿಎಸ್ ಜಿಲ್ಲಾ ಮುಖಂಡ ರಾಜುಗೌಡ ಪಾಟೀಲ್ ಉದ್ಘಾಟಿಸಿದರು.

ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ದಸ್ತಗೀರ ಮುಲ್ಲಾ ಮಾತನಾಡಿ, ಕರ್ನಾಟಕ ರಾಜ್ಯ ವೈವಿಧ್ಯತೆಯನ್ನು ಹೊಂದಿದ ರಾಜ್ಯ. ರಾಜ್ಯದ ಸಿರಿ ಸಂಪತ್ತನ್ನು ಉಳಿಸಬೇಕಾದ್ರೆ ಮೊದಲು ಕನ್ನಡ ಭಾಷೆಯನ್ನು ಉಳಿಸುವ ಕೆಲಸಕ್ಕೆ ಮುಂದಾಗಬೇಕು. ಇಂದಿನ ಆಧುನಿಕ ಶಿಕ್ಷಣದ ಸಂಕೋಲೆಗೆ ಸಿಲುಕಿ ಜನ ಕನ್ನಡ ಶಿಕ್ಷಣವನ್ನು ಮರೆಯುತ್ತಿದ್ದಾರೆ ಇದು ದುರಂತದ ಸಂಗತಿಯಾಗಿದೆ. ಕನ್ನಡ ಭಾಷೆ ಶಿಕ್ಷಣ ಉಳಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ಎಲ್ಲರು ಸಂವಿಧಾನವನ್ನು ಗೌರವಿಸಬೇಕು.

ಸಂವಿಧಾನ ಈ ದೇಶದಲ್ಲಿ ಇರದೇ ಇದ್ದರೆ ಯಾರೂ ಮನುಷ್ಯರು ಮನುಷ್ಯರ ತರಹ ಬದುಕಲು ಕಷ್ಟಸಾಧ್ಯ ಇತ್ತು. ಈ ದೇಶದ ಸಂವಿಧಾನ ಇಡೀ ಜಗತ್ತಿಗೆ ಮಾದರಿಯಾದ ಸಂವಿಧಾನ. ಮೂಲಭೂತ ಹಕ್ಕು, ಸ್ವತಂತ್ರವಾಗಿ ಬದುಕುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಸಂವಿಧಾನ ಎಂದು ಹೇಳಿದರು

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸಿದ್ದೂ ಬಳ್ಳಾ, ಸುನಿತಾ ತಳವಾರ ,ಆಕಾಶ. ಬುದಿಹಾಳ, ಸಾಹೇಬಣ್ಣ ಬಾಗೇವಾಡಿ, ಇನ್ನಿತರರಿದ್ದರು.

Related