ಬಾಲಿವುಡ್‌ನಲ್ಲೀಗ ಮದುವೆ ಸೀಸನ್

  • In Cinema
  • November 15, 2021
  • 388 Views
ಬಾಲಿವುಡ್‌ನಲ್ಲೀಗ ಮದುವೆ ಸೀಸನ್

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಬಗ್ಗೆ ಅವರ ಕುಟುಂಬದವರಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಆದರೆ ಮೂಲಗಳಿಂದ ಈ ಸುದ್ದಿ ಖಚಿತಗೊಂಡಿದೆ.

ವಿಕ್ಕಿ-ಕತ್ರಿನಾ ಮದುವೆ ರಾಜಸ್ಥಾನದ ಐಷಾರಾಮಿ ಹೋಟೆಲ್‌ನಲ್ಲಿ ನಡೆಯಲಿದೆ. ಡಿಸೆಂಬರ್ 7ರಿಂದ 9ರವರೆಗೆ ನಡೆಯಲಿರುವ ಈ ಅದ್ದೂರಿ ಮದುವೆ ಸಮಾರಂಭಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ.

ಹಾಗಾಗಿ ತಯಾರಿ ಈಗಲೇ ಜೋರಾಗಿದೆ. ಮದುವೆ ಹೇಗೆ ನಡೆಯಬೇಕು ಎಂದು ಈ ಸ್ಟಾರ್ ಜೋಡಿ ನಿರ್ಧರಿಸಿದೆ. ಅದೇನೋ ಸರಿ, ಆದರೆ ಇವರ ಮದುವೆಯಿಂದಾಗಿ ಬೇರೆ ಸೆಲೆಬ್ರಿಟಿಗಳಿಗೆ ತೊಂದರೆ ಆಗುತ್ತಿದೆ. ಮದುವೆ ಮುಗಿಯುವವರೆಗೂ ಜೈಪುರದಲ್ಲಿ ಬಾಡಿಗೆ ಕಾರುಗಳ ಅಭಾವ ಉಂಟಾಗಲಿದೆ!

ಹೌದು, ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರಿಗೆ ಸಾಕಷ್ಟು ಸ್ನೇಹಿತರಿದ್ದಾರೆ. ಅವರೆಲ್ಲರನ್ನೂ ಮದುವೆ ಆಹ್ವಾನಿಸಲಾಗುತ್ತಿದೆ. ಮುಂಬೈ, ದೆಹಲಿ ಮುಂತಾದ ನಗರಗಳಿಂದ ಸ್ನೇಹಿತರು ಜೈಪುರಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಅವರ ಓಡಾಟಕ್ಕಾಗಿ ಜೈಪುರದಲ್ಲಿ ಇರುವ ಎಲ್ಲ ಐಷಾರಾಮಿ ಬಾಡಿಗೆ ಕಾರುಗಳನ್ನು ಈಗಲೇ ಬುಕ್ ಮಾಡಲಾಗಿದೆ.

ಮದುವೆ ನಡೆಯುವ ದಿನಾಂಕಗಳು ಮಾತ್ರವಲ್ಲದೇ ಅದರ ಆಸುಪಾಸಿನ ದಿನಗಳಿಗೂ ಸೇರಿ ಕಾರುಗಳನ್ನು ಮುಂಗಡವಾಗಿ ಬುಕ್ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಜೈಪುರ ಸುತ್ತಮುತ್ತ ಶೂಟಿಂಗ್ ಮಾಡುತ್ತಿರುವ ಇತರೆ ಟಿವಿ ಮತ್ತು ಸಿನಿಮಾ ಸೆಲೆಬ್ರಿಟಿಗಳಿಗೆ ಕಾರಿನ ಅಭಾವ ಕಾಡಲಿದೆ ಎಂದು ವರದಿ ಆಗಿದೆ.

ವಿಕ್ಕಿ ಹಾಗೂ ಕತ್ರಿನಾ ಮದುವೆಗೆ ಬಾಲಿವುಡ್ ತಾರೆಯರಾದ ಕಬೀರ್ ಖಾನ್, ರೋಹಿತ್ ಶೆಟ್ಟಿ, ವರುಣ್ ಧವನ್, ನತಾಶಾ ದಲಾಲ್, ಕರಣ್ ಜೋಹರ್ ಮೊದಲಾದವರಿಗೆ ಈಗಾಗಲೇ ಆಹ್ವಾನ ಹೋಗಿದೆಯಂತೆ. ಕತ್ರಿನಾರ ಮಾಜಿ ಗೆಳೆಯ ರಣಬೀರ್‌ಗೂ ಆಹ್ವಾನ ಹೋಗಿದ್ದು, ಆಲಿಯಾ ಭಟ್‌ರೊಂದಿಗೆ ಅವರೂ ಮದುವೆಗೆ ಹಾಜರಿರಲಿದ್ದಾರೆ. ನಟ ಸಿದ್ಧಾರ್ಥ್ ಮಲ್ಹೋತ್ರಾರಿಗೂ ಆಹ್ವಾನ ಹೋಗಿದ್ದು, ಅವರ ಗೆಳತಿಯೆಂದು ಹೇಳಲಾಗುವ ಕಿಯಾರಾ ಅಡ್ವಾನಿಯೊಂದಿಗೆ ಭಾಗಿಯಾಗಲಿದ್ದಾರೆ.

ಈಗಾಗಲೇ ಕುಟುಂಬದವರು ರಾಜಸ್ಥಾನ ತಲುಪಿದ್ದು, ತಯಾರಿ ನಡೆಸುತ್ತಿದ್ದಾರೆ. ದೀಪಾವಳಿಯ ಸಮಯದಲ್ಲಿ ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಎಂಗೇಜ್‌ಮೆAಟ್ ಆಗಿದ್ದಾರೆ ಎನ್ನಲಾಗಿದೆ.

Related