ಎಸ್ ಐ ಟಿ ತಂಡದಿಂದ ಹೆಚ್. ಡಿ. ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು

ಎಸ್ ಐ ಟಿ ತಂಡದಿಂದ ಹೆಚ್. ಡಿ. ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು

ಹೊಳೆನರಸೀಪುರ: ಮಹಿಳೆಯರ ಮೇಲೆ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶನಿವಾರ ಮೇ 4ರಂದು ಎಸ್ಐಟಿ ಅಧಿಕಾರಿಗಳು ಎಚ್ ಡಿ ರೇವಣ್ಣ ಅವರ ಹೊಳೆನರಸಪುರದಲ್ಲಿರುವ ನಿವಾಸದಲ್ಲಿ ಸ್ಥಳ ಮಹಾಜರು ನಡೆಸಿದ್ದಾರೆ.

ಇಂದು ಬೆಳಿಗ್ಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯನ್ನು ಕರೆದುಕೊಂಡು ಎಸ್ಐಟಿ ಅಧಿಕಾರಿಗಳ ತಂಡ 5 ವಾಹನಗಳೊಂದಿಗೆ ಬಂದು ಮಹಾಜರು ನಡೆಸಿದ್ದಾರೆ.

ಎಸ್ ಐಟಿ ತಂಡಕ್ಕೆ ಹಾಸನ ಎಎಸ್ ಪಿ ತಮ್ಮಯ್ಯ ಅವರನ್ನೊಳಗೊಂಡ ಸ್ಥಳೀಯ ಪೊಲೀಸರು ಸಾಥ್ ನೀಡಿದರು. ರೇವಣ್ಣ ಅವರ ನಿವಾಸದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಮಹಿಳೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸ್ಥಳ ಮಹಜರು ನಡೆಸಲಾಯಿತು.

ಇದ್ದನ್ನೂ ಓದಿ: ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದ ರೇವಣ್ಣ

ಅಧಿಕಾರಿಗಳು ಮಹಜರು ಪ್ರಕ್ರಿಯೆ ವಿಡಿಯೋ ಮಾಡಿದರು. ಪಂಚನಾಮೆ ಬಳಿಕ ಸ್ಥಳದಲ್ಲಿಯೇ ಸಂತ್ರಸ್ತೆಯ ಹೇಳಿಕೆ ದಾಖಲು ಮಾಡಿಕೊಂಡರು. ಸ್ಥಳ ಮಹಜರು ವೇಳೆಯಲ್ಲಿ ರೇವಣ್ಣ ಅವರ ಪತ್ನಿ ಭವಾನಿ ಮನೆಯಲ್ಲಿಯೇ ಇದ್ದರು. ರೇವಣ್ಣ ಪರ ವಕೀಲರು, ಜೆಡಿಎಸ್ ನಾಯಕರು ಸ್ಥಳದಲ್ಲಿ ಹಾಜರಿದ್ದರು.

Related