ನಾವು ಒಳ್ಳೆಯ ದೇಶದಲ್ಲಿದ್ದೇವೆ, ಜನ ಬೆಂಬಲಿಸುತ್ತಾರೆ; ರಶ್ಮಿಕಾ

ನಾವು ಒಳ್ಳೆಯ ದೇಶದಲ್ಲಿದ್ದೇವೆ, ಜನ ಬೆಂಬಲಿಸುತ್ತಾರೆ; ರಶ್ಮಿಕಾ

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಮತ್ತು ರಾಜಕೀಯಗಳ ವ್ಯಕ್ತಿಗಳನ್ನು ಗುರಿ ಮಾಡಿಕೊಂಡು ಡೀಪ್ ಫೇಕ್ ಎಡಿಟ್ ಮಾಡುತ್ತಿರುವುದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಆದರೆ ಇದರ ಬಗ್ಗೆ ನಾವು ಎದೆಗುಂದದೆ ಹೋರಾಡಬೇಕೆಂದು ನಟಿ ರಶ್ಮಿಕ ಮಂದಣ್ಣ ಅವರು ಹೇಳಿದ್ದಾರೆ

ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಆ ವಿಚಾರದ ಬಗ್ಗೆ ಮಾತನಾಡಿದ್ದಾರೆ. ರಶ್ಮಿಕಾ ನಟನೆಯ ಬಾಲಿವುಡ್ ಸಿನಿಮಾ ‘ಅನಿಮಲ್’ ಈ ವಾರ ತೆರೆಗೆ ಬರ್ತಿದೆ. ಸಿನಿಮಾ ಪ್ರಚಾರಕ್ಕಾಗಿ ತಂಡ ಹೈದರಾಬಾದ್‌ಗೆ ಹೋಗಿದ್ದರು. ಈ ವೇಳೆ ಮಾಧ್ಯಮಗಳ ಪ್ರಶ್ನೆಗೆ ರಶ್ಮಿಕಾ ಉತ್ತರಿಸಿದ್ದಾರೆ.

ಈ ಸಮಸ್ಯೆ ಎಲ್ಲರಿಗೂ ಇದೆ. ಮೊದಲಿಗೆ ಅಮಿತಾಮ್ ಬಚ್ಚನ್ ಸರ್ ಸಪೋರ್ಟ್ ಮಾಡಿದರು. ನಂತರ ಎಲ್ಲರೂ ಬೆಂಬಲಿಸಿದರು. ಮೊದಲು ಆ ವಿಡಿಯೋ ನೋಡಿದಾಗ ನೋವಾಯಿತು. ಆದ್ರೆ ಇದು ಸರ್ವೇ ಸಾಧಾರಣ ಆಗಿಬಿಟ್ಟಿದೆ.

ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ ಎಂದುಕೊಂಡೆ. ಆದ್ರೆ ಎಲ್ಲರೂ ಮುಂದೆ ಬಂದು ಸಪೋರ್ಟ್ ಮಾಡಿದ್ದು ನೋಡಿ ಇದು ಸಾಮಾನ್ಯ ವಿಷಯ ಅಲ್ಲ, ನಾನು ಪ್ರತಿಕ್ರಿಯಿಸಬೇಕು ಎಂದುಕೊಂಡೆ. ಇದೇ ಕಾರಣಕ್ಕೆ ಈಗ ಡೀಪ್‌ಫೇಕ್‌ ಬಗ್ಗೆ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ. ಹಾಗಾಗಿ ಎಲ್ಲಾ ಹುಡುಗಿಯರಿಗೆ ಹೇಳಲು ಬಯಸುತ್ತೇನೆ. ಈ ವಿಷಯಗಳು ಸಾಮಾನ್ಯವಲ್ಲ, ಇದು ನಿಮಗೆ ಎದುರಾದರೆ ಮೌನವಾಗಿರಬೇಡಿ, ಮುಂದೆ ಬಂದು ಪ್ರತಿಕ್ರಿಯಿಸಿ, ನಾವು ಒಳ್ಳೆಯ ದೇಶದಲ್ಲಿದ್ದೇವೆ, ಜನ ಬೆಂಬಲಿಸುತ್ತಾರೆ ಎಂದು ರಶ್ಮಿಕಾ ಹೇಳಿದ್ದಾರೆ.

 

Related