ಜಿಲ್ಲೆಯಲ್ಲಿ ವಾಕ್ -ಇನ್- ಕೋವಿಡ್ -19 ಟೆಸ್ಟ್

ಜಿಲ್ಲೆಯಲ್ಲಿ ವಾಕ್ -ಇನ್- ಕೋವಿಡ್ -19 ಟೆಸ್ಟ್

ಮಂಡ್ಯ : ಜಿಲ್ಲೆಯಲ್ಲಿ ಮಂಡ್ಯ ಜಿಲ್ಲಾಡಳಿತವು ಸ್ವಾಬ್ ಸಂಗ್ರಹ ಕೇಂದ್ರಗಳಲ್ಲಿ ವಾಕ್-ಇನ್- ಕೋವಿಡ್ ಪರೀಕ್ಷೆಗಳನ್ನು ನಡೆಸಲು ಸಿದ್ಧವಾಗಿದೆ.

ಮಂಡ್ಯದಲ್ಲಿ ಕೋವಿಡ್-19 ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, 21 ಜನ ಸಾವನ್ನಪ್ಪಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1, 159 ಆಗಿದೆ.

ನಗರದಲ್ಲಿ ಪಾಸಿಟವ್ ಪ್ರಕರಣಗಳು ಹೆಚ್ಚಿದ್ದು, ಜಿಲ್ಲೆ ಇತರ ಕಡೆಗಳಲ್ಲಿ ಕಡಿಮೆ ಸಂಖ್ಯೆಯಲ್ಲಿವೆ. ಆದರೆ, ಇದು ನಗರದ ವ್ಯಾಪ್ತಿಯಲ್ಲಿನ ಆರೋಗ್ಯ ಮೂಲಸೌಕರ್ಯಗಳ ಬಗ್ಗೆ ಎಚ್ಚರಿಕೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಕ್ -ಇನ್ ಟೆಸ್ಟಿಂಗ್ ಸೌಕರ್ಯದಿಂದ ಹೆಚ್ಚು ಜನರಿಂದ ಹೆಚ್ಚು ಪರೀಕ್ಷೆಗಳನ್ನು ಮಾಡಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್. ಪಿ. ಮಂಚೇಗೌಡ ಹೇಳಿದರು.

ಜಿಲ್ಲೆಯಲ್ಲಿ ಸ್ವಾಬ್ ಸಂಗ್ರಹ ಕೇಂದ್ರಗಳನ್ನು ಹೆಚ್ಚಿಸಲು ಎದುರು ನೋಡಲಾಗುತ್ತಿದೆ. ಜನರು ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವೊಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮತ್ತು ಕ್ಷಿಪ್ರ ಪರೀಕ್ಷಾ ಸಾಧನಗಳನ್ನು ಹೊಂದಿರುವ ಎರಡು ವ್ಯಾನ್ ಗಳನ್ನು ನಿಯೋಜಿಸಲು ಜಿಲ್ಲಾ ಆರೋಗ್ಯ ಇಲಾಖೆ ಸಜ್ಜಾಗಿದೆ ಎಂದು ಡಿಹೆಚ್ ಒ ತಿಳಿಸಿದ್ದಾರೆ.

Related