ವಿವಿ ಘಟಿಕೋತ್ಸವ ಪದಕ ಪ್ರಧಾನ

  • In State
  • February 25, 2020
  • 343 Views
ವಿವಿ ಘಟಿಕೋತ್ಸವ ಪದಕ ಪ್ರಧಾನ

ಪ್ರಜಾವಾಹಿನಿ-ತುಮಕೂರು
ನಡೆದ ತುಮಕೂರು ವಿಶ್ವವಿದ್ಯಾನಿಲಯದ ೧೩ನೇ ಘಟಿಕೋತ್ಸವದಲ್ಲಿ ಈ ಬಾರಿ ವಿವಿಧ ವಿಭಾಗಗಳ ಕೋರ್ಸ್ಗಳಲ್ಲಿ ಉತ್ತಮ ಅಂಕಗಳಿಸಿರುವ ೭೦ ವಿದ್ಯಾರ್ಥಿಗಳು ೯೨ ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡರು. ಮೂವರಿಗೆ ಡಿಲಿಟ್ ಪದವಿ, ಸಂಶೋಧನಾ ಕಾರ್ಯವನ್ನು ಪೂರ್ಣಗೊಳಿಸಿದ ೯೪ ವಿದ್ಯಾರ್ಥಿಗಳಿಗೆ ಪಿಹೆಚ್‌ಡಿ ಪದವಿ ಪ್ರಧಾನ ಮಾಡಲಾಯಿತು.

೬೨೫೭ ವಿದ್ಯಾರ್ಥಿಗಳು ಪದವಿ, ೧೫೮೭ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶಿಕ್ಷಣ, ಸಮಾಜ ಸೇವೆ, ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಕುಣಿಗಲ್ ತಾಲ್ಲೂಕಿನ ಸಿ.ಎನ್.ಮಂಚೇಗೌಡ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಎಂಎಸ್ಸಿ ಗಣಿತದಲ್ಲಿ ಎಚ್.ಎಸ್.ಮನೋಹರ್ ೫ ಚಿನ್ನದ ಪದಕ, ಎಂಕಾAನಲ್ಲಿ ಎಂಸಿ ದಿವ್ಯಾಮಣಿ ೪ ಚಿನ್ನದ ಪದಕ, ಎಂಎ ಕನ್ನಡದಲ್ಲಿ ಟಿ.ಡಿ.ಲಾವಣ್ಯ ಅವರು ೩ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಘಟಿಕೋತ್ಸವದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿ ಪದಕಗಳನ್ನು ಪ್ರಧಾನ ಮಾಡಿದರು. ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟದ ಅಧ್ಯಕ್ಷ ಮಣಿಕ್ ರಾವ್ ಎಂ.ಸಾಲೊAಖೆ ಅವರು ಘಟಿಕೋತ್ಸವ ಭಾಷಣ ಮಾಡಿದರು.ರಾಜ್ಯಪಾಲರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೆದ ಸಿ.ಎನ್.ಮಂಚೇಗೌಡರಿಗೆ ಗೌರವ ಡಾಕ್ಟರೇಟ್ ನೀಡಿದರು. ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಕುಲಸಚಿವ (ಮೌಲ್ಯಮಾಪನ) ಪ್ರೊ.ಕೆ.ಜೆ.ಸುರೇಶ್, ಪ್ರೊ.ಕೆ.ಎನ್.ರಂಗನಾಯ್ಕ್ ಮತ್ತಿತರರಿದ್ದರು.

Related