ರಾಷ್ಟ್ರಪತಿ ಚುನಾವಣೆಗೆ ಮತದಾನ; ಪ್ರಮುಖರಿಂದ ವೋಟಿಂಗ್

ರಾಷ್ಟ್ರಪತಿ ಚುನಾವಣೆಗೆ ಮತದಾನ; ಪ್ರಮುಖರಿಂದ ವೋಟಿಂಗ್

ದೆಹಲಿ ಜು18: ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್  ಅವರ ಅವಧಿ  ಜುಲೈ 24ರಂದು ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ನೂತನ ರಾಷ್ಟ್ರಪತಿ ಆಯ್ಕೆಗೆ ಇಂದು ಮತದಾನ ನಡೆಯುತ್ತಿದೆ. ಬುಡಕಟ್ಟು ಸಮುದಾಯದ ನಾಯಕಿ ದ್ರೌಪದಿ ಮುರ್ಮು  ಹಾಗೂ ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಕಣದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖರು ಈಗಾಗಲೇ ಮತದಾನ ಮಾಡಿದ್ದಾರೆ.

ನೂತನ ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣೆ ನಡೆಯುತ್ತಿದೆ. ಸಂಸತ್‌ನ 776 ಸದಸ್ಯರು ಮತ್ತು 4,033 ಶಾಸಕರು ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಮತಗಳ ಒಟ್ಟು ಮೌಲ್ಯ 10,86,431 ಆಗಿದ್ದು, ಇದರಲ್ಲಿ ಶಾಸಕರ ಮತಗಳು 5,43,231 ಮತ್ತು ಸಂಸದರ ಮತಗಳು 5,43,200 ಆಗಿದೆ. ಜುಲೈ 21ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಪ್ರಧಾನಿ ನರೇಂದ್ರ ಮೋದಿ ಮತದಾನ ಮಾಡಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರಾಷ್ಟ್ರಪತಿ ಚುನಾವಣೆಯಲ್ಲಿ ವೋಟ್ ಮಾಡಿದ್ದಾರೆ. ಅನಾರೋಗ್ಯ ಇದ್ದರೂ ವ್ಹೀಲ್ ಚೇರ್‌ನಲ್ಲಿ ಬಂದು, ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ತಮ್ಮ ಸಹಾಯಕರ ಹೆಲ್ಪ್ ಪಡೆದು ಮನಮೋಹನ್ ಸಿಂಗ್ ವೋಟ್ ಮಾಡಿದ್ದಾರೆ.

ಇತ್ತ ಕರ್ನಾಟಕದಲ್ಲೂ ರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆಯುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖರು ವೋಟ್ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದಲ್ಲಿ ಮತ ಚಲಾಯಿಸಿದ್ದಾರೆ. ದ್ರೌಪತಿ ಮುರ್ಮು ಹೆಸರಿಗೆ ಸಹಮತ ಹಾಗೂ ಸಂತೋಷ ದೇಶಾದ್ಯಂತ ಮೂಡಿಬಂದಿದೆ. ಎನ್ ಡಿ ಎ ಮಿತ್ರ ಪಕ್ಷ ಮಾತ್ರ ಅಲ್ಲ ವಿರೋಧ ಪಕ್ಷಗಳು ಕೂಡಾ ಬೆಂಬಲ ಸೂಚಿಸಿದೆ. ದ್ರೌಪತಿ ಮುರ್ಮು ದಕ್ಷ ಆಡಳಿತಗಾರ, ರಾಜ್ಯಪಾಲೆ,ಮಂತ್ರಿಯಾಗಿ ಅವರ ಸೇವೆ ಅಮೋಘವಾಗಿದೆ ಅಂತ ಬೊಮ್ಮಾಯಿ ಶ್ಲಾಫಿಸಿದ್ದಾರೆ.

 

 

Related