ಸಿಕ್ಸರ್ ಸರದಾರನಾಗಿ ವಿರಾಟ್ ಕೊಹ್ಲಿ

ಸಿಕ್ಸರ್ ಸರದಾರನಾಗಿ ವಿರಾಟ್ ಕೊಹ್ಲಿ

ಬೆಂಗಳೂರು: ನಿನ್ನೆ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಮತ್ತು ಕೆಕೆಆರ್ ಮುಖಾಮುಖಿಯಾಗಿದ್ದು ಈ ಪಂದ್ಯದಲ್ಲಿ ಕೆಕೆಆರ್ ಭರ್ಜರಿ ಜಯಗಳಿಸಿದೆ.

ಇನ್ನು ಆರ್‌ಸಿಬಿ ತಂಡ ಸೋತಿದ್ದರು ಕೂಡ ವಿರಾಟ್ ಕೊಹ್ಲಿ ಭರ್ಜರಿ ದಾಖಲೆಯನ್ನು ಕಳಿಸಿದ್ದಾರೆ.

ಹೌದು, ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 3 ಭರ್ಜರಿ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕೆಕೆಆರ್ ವಿರುದ್ಧದ ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಕೊಹ್ಲಿ ಜಬರ್​ದಸ್ತ್ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಕೊಹ್ಲಿ 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಅಲ್ಲದೆ 59 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ 4 ಫೋರ್​ಗಳೊಂದಿಗೆ ಅಜೇಯ 83 ರನ್ ಬಾರಿಸಿದರು. ಈ ಭರ್ಜರಿ ಇನಿಂಗ್ಸ್​ನೊಂದಿಗೆ ಕೊಹ್ಲಿ 2 ದಾಖಲೆಗಳನ್ನು ಬರೆದರು.

ಈ ಪಂದ್ಯದಲ್ಲಿ 4 ಸಿಕ್ಸ್ ಸಿಡಿಸುವುದರೊಂದಿಗೆ ಆರ್​ಸಿಬಿ ಪರ ಅತ್ಯಧಿಕ ಸಿಕ್ಸ್ ಬಾರಿಸಿದ ಬ್ಯಾಟರ್ ಎಂಬ ದಾಖಲೆ ಕೊಹ್ಲಿ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ (239 ಸಿಕ್ಸ್) ಹೆಸರಿನಲ್ಲಿತ್ತು. ಇದೀಗ 241 ಸಿಕ್ಸ್​ಗಳೊಂದಿಗೆ ಆರ್​ಸಿಬಿ ತಂಡದ ಸಿಕ್ಸರ್ ಸರದಾರನಾಗಿ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದಾರೆ.

 

Related