ಆತ್ಮಹತ್ಯೆಗೆ ಶರಣಾದ ನಟಿ…!

ಆತ್ಮಹತ್ಯೆಗೆ ಶರಣಾದ ನಟಿ…!

ದೆಹಲಿ: ಸಿನಿಮಾ ರಂಗಕ್ಕೆ ಬಂದರೆ ಸಾಕು ಕೆಲವರು ಫೇಮಸ್ ಆಗುತ್ತಾರೆ ಇನ್ನು ಕೆಲವರು ಫೇಮಸ್ ಆಗದೆ ತಮ್ಮ ವೃತ್ತಿಯನ್ನು ಬದಲಿಸುತ್ತಾರೆ. ಹೌದು, ಬಣ್ಣದ ಲೋಕಾನೇ ಹೀಗೆ, ಸಾವಿರಾರು ಕನಸುಗಳನ್ನು ಹೊತ್ತು ಬರುವ ನಟ-ನಟಿಯರಿಗೆ ಸಿನಿಮಾಲೋಕ ಒಂದು ಹೊಸ ಪ್ರಪಂಚವಾಗಿರುತ್ತದೆ.

ಆದರೆ ಈ ಸಿನಿಮಾ ರಂಗದಲ್ಲಿ ಕೆಲವರಿಗೆ ಅದೃಷ್ಟ ಕ್ಕೆ ಹಿಡಿದರೆ, ಇನ್ನು ಕೆಲವರಿಗೆ ಅದೃಷ್ಟ ಕೈ ಹಿಡಿಯುವುದಿಲ್ಲ. ಅದೃಷ್ಟ ಕೈ ಹಿಡಿಯದ ನಟ ನಟಿಯರು ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಒಳಗಾಗುತ್ತಾರೆ. ಅಂತದ್ದೇ ಒಂದು ಪ್ರಕರಣ ಈಗ ಬೆಳಕಿಗೆ ಬಂದಿದ್ದು, ನಟಿ ಅಮೃತಾ ಪಾಂಡ್ಯ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಂದು ಬೆಳಕಿಗೆ ಬಂದಿದೆ.

ಯೆಸ್..‌ ಭೋಜ್​ಪುರಿ ನಟಿ ಅಮೃತಾ ಪಾಂಡೆ  ಇದೇ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಿಹಾರ ಮೂಲದ ಈ ನಟಿ ಅಪಾರ್ಟ್​ಮೆಂಟ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವುದಕ್ಕೂ ಮೊದಲು ಅವರು ನಿಗೂಢಾರ್ಥದಲ್ಲಿ ವಾಟ್ಸಾಪ್ ಸ್ಟೇಟಸ್ ಒಂದನ್ನು ಹಾಕಿದ್ದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಚಿವ ಕೃಷ್ಣಭೈರೇಗೌಡ ಹೇಳಿದ್ದೇನು…?

ಇನ್ನು ಅಮೃತಾ ಪಾಂಡೆ ಅವರು ಸಾಯುವುದಕ್ಕೂ ಮೊದಲು  ಸ್ಟೇಟಸ್ ಒಂದನ್ನು ಹಾಕಿದ್ದರು. ‘ಅವರ ಜೀವನ ಎರಡು ದೋಣಿಗಳ ಮೇಲಿದೆ. ನಾವು ನಮ್ಮ ದೋಣಿಯನ್ನು ಮುಳುಗಿಸುವ ಮೂಲಕ ಅವರ ಮಾರ್ಗವನ್ನು ಸುಲಭಗೊಳಿಸಿದ್ದೇವೆ’ ಎಂದು ಸ್ಟೇಟಸ್ ಹಾಕಿದ್ದರು. ಇದರಿಂದ ಅವರ ಪತಿ ಮತ್ತೊಬ್ಬರನ್ನು ಪ್ರೀತಿಸುತ್ತಿದ್ದರೇ ಎನ್ನುವ ಅನುಮಾನ ಮೂಡಿದೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.

 

Related