ವಿಡಿಯೋ ಚಿತ್ರೀಕರಣ ಕೇಸ್: ಸಂತ್ರಸ್ತೆ ಹಾಗೂ ಕಾಲೇಜು ಆಡಳಿತ ಇಂದು ಭೇಟಿಯಾಗಲಿರುವ ಖುಷ್ಬೂ

ವಿಡಿಯೋ ಚಿತ್ರೀಕರಣ ಕೇಸ್: ಸಂತ್ರಸ್ತೆ ಹಾಗೂ ಕಾಲೇಜು ಆಡಳಿತ ಇಂದು ಭೇಟಿಯಾಗಲಿರುವ ಖುಷ್ಬೂ

ಉಡುಪಿ: ಉಡುಪಿ ನಗರದ ಕಾಸಗಿ ಕಾಲೇಜು ಒಂದರಲ್ಲಿ, ಕಾಲೇಜಿನ ವಾಷ್ ರೂಂನಲ್ಲಿ ಯುವತಿಯ ವಿಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆಗೆ ಕೈಗೊಂಡಿದ್ದು ನಿನ್ನೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಖುಷ್ಬೂ ಸುಂದರ್ ಅವರು ಉಡುಪಿಗೆ ಭೇಟಿ ನೀಡಿದ್ದು ಇಂದು ಕಾಲೇಜಿಗೆ ಭೇಟಿ ವಿವರಣೆ ಪಡೆಯಲಿದ್ದಾರೆ.

ಹೌದು, ನಗರದ ಕಾಲೇಜೊಂದ ವಾಷ್ ರೂಮೊಂದರಲ್ಲಿ ಯುವತಿಯೊಬ್ಬಳ ವಿಡಿಯೋ ಚಿತ್ರೀಕರಿಸಿರುವ ಆರೋಪದ ಪ್ರಕರಣದಲ್ಲಿ ತನಿಖೆ ಚುರಕುಗೊಗೊಂಡಿದೆ. ಕೇಸ್ ಸಂಬಂಧಿಸಿದಂತೆ ಅಲ್ಪಸಮುದಾಯಕ್ಕೆ ಸೇರಿದ ಮೂವರು ವಿದ್ಯಾರ್ಥಿನಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಬುಧವಾರ ಉಡುಪಿಗೆ ಆಗಮಿಸಿದ್ದು ಇಂದು ಕಾಲೇಜಿನ ಆಡಳಿತ ಮಂಡಳಿ ಮತ್ತು ಸಂತ್ರಸ್ತೆಯ ಪೋಷಕರನ್ನು ಮಾತಾಡಿಸಲಿದ್ದಾರೆ. ವಿಡಿಯೋದಲ್ಲಿ ಇನ್ನೂ ಯಾವುದೇ ಸಾಕ್ಷ್ಯಾಧಾರ ಪೊಲೀಸರಿಗೆ ಲಭ್ಯವಾಗಿಲ್ಲ ಮತ್ತು ಘಟನೆಗೆ ಯಾವುದೇ ಕೋಮಿನೊಂದಿಗೆ ಸಂಬಂಧ ಕಲ್ಪಿಸದಂತೆ ಅವರು ಜನರಲ್ಲಿ ಮನವಿ ಮಾಡಿದ್ದಾರೆ.

 

Related