ಲಸಿಕಾ ವಿತರಣಾ ಕಾರ್ಯಕ್ರಮ

ಲಸಿಕಾ ವಿತರಣಾ ಕಾರ್ಯಕ್ರಮ

ದಾಸರಹಳ್ಳಿ: ಸೈಂಟ್ ಕ್ಲಾರೆಟ್ ಕಾಲೇಜ್ ಹಾಗೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಕೊರೋನಾ ಲಸಿಕೆ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರೆ. ಫಾದರ್ ಥಾಮಸ್ ತೆನೆಡಿಯಲ್ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬರು ಕೊರೊನವನ್ನು ಎದುರಿಸುವ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ಡಾ. ಲೀಲಾವತಿ ಮಾತನಾಡಿ ಸಾಮಾಜಿಕ ಅಂತರವೇ ಪ್ರಮುಖ ಕ್ರಮ ಹಾಗೂ ಪ್ರತಿಯೊಬ್ಬರು ಮಾಸ್ಕ್ ದರಿಸುವುದು ಕಡ್ಡಾಯವೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ 96 ಜನರಿಗೆ ಕೊರೋನಾ ಲಸಿಕೆಯನ್ನು ವಿತರಿಸಲಾಯಿತು.

Related